QR Code Business Card

ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ನವದೆಹಲಿ ಆಯೋಜಿಸಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ದಿನಾಂಕ 27-12-2018 ರಿಂದ 21-12-2018  ರವರೆಗೆ ಕೇರಳದ ಪಾಲಕ್ಕಾಡ್‌ ಇಲ್ಲಿ ನಡೆಯಲಿರುವುದು. ಈ ಶಿಬಿರದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್‌ಗಳಾದ ಆಶೀಶ್‌ ಶಂಕರ, ರವಿಶಂಕರ, ಮಯೂರ್, ಅನೀಶ್‌ ಮಯ್ಯ, ಕೌಶಲ್‌ ಸುಬ್ರಮಣ್ಯ, ಶಶಾಂಕ್ ಬಿ., ಮುರಳಿ ಕಾರ್ತಿಕ್, ಅಂಕಿತ್ ಕೆ.ಎಲ್. ಹಾಗೂ ಗೈಡ್ಸ್‌ಗಳಾದ ಶ್ರದ್ಧಾ, ಶ್ರೇಯ, ಧೃತಿ.ಪಿ.ಭಟ್, ಶ್ರದ್ಧಾಕೃಷ್ಣ, ರಮ್ಯಶ್ರೀ.ಕೆ.ಟಿ., ವರ್ಣ, ಶ್ರದ್ಧಾ.ಕೆ.ನಾಯ್ಕ್, ಪೂಜಾ.ಜೆ. ಇವರು ಭಾಗವಹಿಸಲಿರುವರು. ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿರುವ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶಿಬಿರದಲ್ಲಿ ದಕ್ಷಿಣಕನ್ನಡ ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಕಲೆ, ಸಂಸ್ಕೃತಿ, ಆಹಾರಪದ್ಧತಿ, ಹಬ್ಬ-ಹರಿದಿನಗಳು, ರಾಷ್ಟ್ರೀಯ ಭಾವೈಕ್ಯತಾ ಆಟಗಳು ಪ್ರದರ್ಶನಗಳು ನಡೆಯಲಿರುವುದು. ಈ ತಂಡದ ನೇತೃತ್ವವನ್ನು ಸಂಸ್ಥೆಯ ಗೈಡ್‌ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಅನುರಾಧಾ. ಎ.(HWB Guides) ಇದರ ನಾಯಕತ್ವವನ್ನು ವಹಿಸಲಿರುವರು ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯತ ಸತೀಶ್‌ಕುಮಾರ್ ರೈ ಅವರು ಪತ್ರಿಕಾ ವರದಿಯಲ್ಲಿ ತಿಳಿಸಿರುತ್ತಾರೆ.