QR Code Business Card

ರಥಸಪ್ತಮಿ : ಸಾಮೂಹಿಕ ಸೂರ್ಯ ನಮಸ್ಕಾರ

ಜಗತ್ತಿಗೇ ಶಕ್ತಿ ಹಾಗೂ ಬೆಳಕನ್ನು ನೀಡುವ ಭಗವಾನ್ ಸೂರ್ಯದೇವರ ಜನ್ಮದಿನವನ್ನು ರಥಸಪ್ತಮಿ ಎಂದು ದೇಶಾದ್ಯಂತ ಆಚರಿಸುವಂತೆ, ದಿನಾಂಕ 12-2-2019 ನೇ ಮಂಗಳವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾಂಗಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡುವ ಮೂಲಕ ಭಕ್ತಿ, ಶ್ರದ್ಧೆಗಳಿಂದ ಆಚರಿಸಲಾಯಿತು.

ಶಾಲೆಯ ಸುಮಾರು 1800 ಕ್ಕೂ ಮಿಕ್ಕಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರಿಂದ ಸಾಮೂಹಿಕ ಸೂರ್ಯ ನಮಸ್ಕಾರ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಡಾ| ಶಶಿಧರ್ ಕಜೆ, ಉಪಾಧ್ಯಕ್ಷ ಶ್ರೀ ರಾಧಾಕೃಷ್ಣ ನಂದಿಲ ಹಾಗೂ ಸದಸ್ಯರು ಮತ್ತು ಪೋಷಕರು ಸಕ್ರಿಯವಾಗಿ ಭಾಗವಹಿಸಿದ್ದರು.