QR Code Business Card

ಹಿಂಗಾರ ಕವನ ಸಂಕಲನ ಬಿಡುಗಡೆ

ದಿನಾಂಕ 2-3-2019 ನೇ ಶನಿವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಚಿತ್ರಕಲಾ ಶಿಕ್ಷಕರಾದ ಚೇತನ್.ಕೆ ವಿಟ್ಲರವರ ಚೊಚ್ಚಲ ಕನ್ನಡ ಕವನ ಸಂಕಲನವಾದ ಹಿಂಗಾರ -ಪ್ರಕೃತಿ ಕವನಗಳು ಪುಸ್ತಕ ಬಿಡುಗಡೆ ಸಮಾರಂಭ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಭಾಸ್ಕರ್ ಅಡ್ವಳ್‌ರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಮುರಳೀಧರ.ಕೆ ಅವರು ವಹಿಸಿದರು. ಹಿಂಗಾರ ಕವನ ಸಂಕಲನವನ್ನು ಸಾಹಿತಿ ನಾಗರಾಜ್ ಖಾರ್ವಿ ಬಿಡುಗಡೆಗೊಳಿಸಿ ವಿಮಾರ್ಶೆಯ ಮಾತುಗಳಾನ್ನಾಡಿ ಶುಭ ಹಾರೈಸಿದರು.


ಅತಿಥಿಗಳಾಗಿ ಹಿರಿಯ ಸಾಹಿತಿ ವಿ.ಬಿ.ಅರ್ತಿಕಜೆ ಹಾಗೂ ಶಿಕ್ಷಕ-ರಕ್ಷಕ ಅಧ್ಯಕ್ಷರಾದ ಡಾ|ಶಶಿಧರ ಕಜೆ ಮತ್ತು ಶಾಲಾ ಮುಖ್ಯೋಪಾಧ್ಯಾಯರು ಸತೀಶ್ ಕುಮಾರ್ ರೈ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಕು.ಹಿತಾ ಪ್ರಾರ್ಥಿಸಿ, ಶ್ರೀಮತಿ ಆಶಾ ಶೆಟ್ಟಿ ಸ್ವಾಗತಿಸಿ ಹಾಗೂ ಶಿಕ್ಷಕರಾದ ಗಣೇಶ್ ಏತಡ್ಕ ವಂದಿಸಿದರು, ಶ್ರೀಮತಿ ಕವಿತಾ ಹಾಗೂ ಶ್ರೀಮತಿ ಯಶೋಧ ಕಾರ್ಯಕ್ರಮ ನಿರೂಪಿಸಿದರು.