QR Code Business Card

BASE ಸಂಸ್ಥೆಯಿಂದ I.I.T. ತರಬೇತಿ ಕಾರ್ಯಾಗಾರ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ BASE Bangalore ನ ಸಂಸ್ಥೆಯಿಂದ ಕಾರ್ಯಾಗಾರವು ಜುಲೈ 24 ರಂದು ಪ್ರಾರಂಭಗೊಂಡಿತು. BASE ನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಚಿತ್ಕಲಾ, ಕು. ಪವಿತ್ರ ಜಯರಾಂ, ಕು. ನಿವೇದಿತಾ ಹಾಗೂ ಶ್ರೀ ಗೌತಮ್ ಕಾರ್ಯಾಗಾರದ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಸುಲೇಖ ವರದರಾಜ್ ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ರೈ ಸಭಿಕರನ್ನು ಸ್ವಾಗತಿಸಿ, ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. BASE ನ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು. ಶಿಕ್ಷಕಿ ಸಿಂಧು ಧನ್ಯವಾದ ಅರ್ಪಿಸಿದರು. ರೇಖಾ ಮತ್ತು ಸಂಧ್ಯಾ ಕಾರ್ಯಕ್ರಮ ನಿರ್ವಹಿಸಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರಾಜಶೇಖರ್ ತಾಂತ್ರಿಕ ನಿರ್ವಹಿಸಿ, ಶಾರದಾ ಶೆಟ್ಟಿ ಸಹಕರಿಸಿದರು.

DSCF4044

DSCF4047