QR Code Business Card

ಡ್ರಾಯಿಂಗ್ ಗ್ರೇಡ್ ಪರೀಕ್ಷೆ ಆರಂಭ

ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಇದರ ವತಿಯಿಂದ ನಡೆಸಲ್ಪಡುವ ಪ್ರೌಢ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಲೋವರ್ ಗ್ರೇಡ್ ಮತ್ತು ಹೈಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯು ದಿನಾಂಕ 23-11-2015 ರಂದು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಆರಂಭವಾಯಿತು.

Drawing

ಎರಡು ವಿಭಾಗಗಳಲ್ಲಿ ನಡೆಯುವ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು, ವಿವೇಕಾನಂದ ಕನ್ನಡ ಮಾಧ್ಯಮ ಶಾ, ತೆಂಕಿಲ, ಸುದಾನ ವಸತಿಯುತ ಶಾಲೆ ಪುತ್ತೂರು, ಬಾಲವಿಕಾಸ ಶಾಲೆ ಮಾಣಿ, ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ, ಸುಭೋದಯ ಪ್ರೌಢಶಾಲೆ ಪಾಣಾಜೆ, ಸರಕಾರಿ ಪ್ರೌಢ ಶಾಲೆ, ಪುತ್ತೂರು ಇಲ್ಲಿನ 214 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದಾರೆ.

ವೀಕ್ಷಕರಾಗಿ ರುಕ್ಮಯ್ಯ ಗೌಡ, ರುಕ್ಮಯ್ಯ ಪೂಜಾರಿ, ಜಗನ್ನಾಥ, ಶಾರದಾ, ರಾಮಚಂದ್ರ, ರಾಜೇಂದ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಸಹವೀಕ್ಷಕರಾಗಿ ರಾಜ್‌ಕುಮಾರ್ ಕಾಟುಕುಕ್ಕೆ ಮತ್ತು ಪರಿವೀಕ್ಷಕರಾಗಿ ಸತೀಶ್ ಕುಮಾರ್ ರೈ ಮುಖ್ಯಗುರುಗಳು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.