QR Code Business Card

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪುಸ್ತಕ ಸಪ್ತಾಹ 2015 – ಸರಸ್ವತಿ ಹೋಮ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ ಇಲ್ಲಿ 16-02-2015 ನೇ ಸೋಮವಾರ ಪುಸ್ತಕ ಸಪ್ತಾಹ-2015 ಸರಸ್ವತಿ ಹೋಮ ಮಾಡುವುದರ ಮೂಲಕ ಆರಂಭಿಸಿಸಲಾಯಿತು.

DSCN2332

DSCN2306

DSCN2378

DSCN2336

ಕಲ್ಲಡ್ಕ ಶ್ರೀರಾಮ ಕೇಂದ್ರದ ಉಪನ್ಯಾಸಕ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರ ನೇತೃತ್ವದಲ್ಲಿ ಸರಸ್ವತಿ ಹೋಮ ನಡೆದು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಪೋಷಕರ ಸಮ್ಮುಖದಲ್ಲಿ ಪುಸ್ತಕ ಸಪ್ತಾಹವನ್ನು ಪ್ರಾರಂಭಿಸಲಾಯಿತು. ಸುಮಾರು 50 ಸಾವಿರಕ್ಕಿಂತಲೂ ಮಿಕ್ಕಿ ಪುಸ್ತಕಗಳನ್ನು ತಾಯಿ ಶಾರದೆಗೆ ಅರ್ಪಿಸಲಾಯಿತು. ಪೋಷಕರು ಮತ್ತು ಶಿಕ್ಷಕರು 7 ಗೋದ್ರೆಜನ್ನು ದಾನವಾಗಿ ನೀಡಿದರು.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶಿವಪ್ರಸಾದ್.ಇ, ಸಂಸ್ಥೆಯ ಅಧ್ಯಕ್ಷರಾದ ಡಾ| ಕೃಷ್ಣ ಭಟ್ ಕೊಂಕೋಡಿ, ಸಂಚಾಲಕರಾದ ರವೀಂದ್ರ ಪಿ, ಮುಖ್ಯಗುರು ಸತೀಶ್ ಕುಮಾರ್ ರೈ, ಪೋಷಕ ವೃಂದ ಮತ್ತು ಶಿಕ್ಷಕ-ಶಿಕ್ಷಕೇತರ ವೃಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.