QR Code Business Card

ನ್ಯಾಷನಲ್ ಚಿಲ್ಡ್ರನ್ಸ್ ಸೈನ್ಸ್ ಕಾಂಗ್ರೆಸ್-2014 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ, ಬೀದರ್ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಹಯೋಗದೊಂದಿಗೆ ದಿನಾಂಕ 10-12-2014 ರಿಂದ 12-12-2014 ರವರೆಗೆ ಅಕ್ಕಮಹಾದೇವಿ ಮಹಿಳಾ ಕಾಲೇಜು, ಬೀದರ್‌ನಲ್ಲಿ ನಡೆದ ರಾಜ್ಯಮಟ್ಟದ ನ್ಯಾಷನಲ್ ಚಿಲ್ಡ್ರನ್ಸ್ ಸೈನ್ಸ್ ಕಾಂಗ್ರೆಸ್-2014 ಯೋಜನಾ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

DSCF2495

ಸೀನಿಯರ್ ವಿಭಾಗದಲ್ಲಿ ಹರ್ಷ, ದೇವಿ ಮುರಳಿಕೃಷ್ಣ, ಅಕ್ಷತಾ ಶೆಟ್ಟಿ, ರಕ್ಷಾ ಮತ್ತು ಶ್ರೀಜಾ ಶೆಟ್ಟಿಯವರ ತಂಡ ಹಾಗೂ ಜೂನಿಯರ್ ವಿಭಾಗದಲ್ಲಿ ವರುಣ್ ಕೆ, ಪವನ್ ಸಿ, ನಿಶ್ಚಿತ್ ರೈ, ಸ್ವಸ್ತಿಕ್ ಪದ್ಮ ಮತ್ತು ಗೌರೀಶ ಕಜಂಪಾಡಿಯವರ ತಂಡ ಪ್ರಥಮ ಸ್ಥಾನ ಗಳಿಸಿದ್ದಾರೆ. ತಂಡಗಳು ಡಿ.27 ರಿಂದ 29 ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಈ ಯೋಜನಾ ಕಾರ್ಯವನ್ನು ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ಸಿಂಧು, ಶ್ರೀಮತಿ ರೇಖಾ, ಶ್ರೀಮತಿ ಸಾಯಿಗೀತಾ ಎಸ್.,