QR Code Business Card

ಸ್ಕೌಟ್ಸ್ ಮತ್ತು ಗೈಡ್ಸ್‌ಗಳಿಗೆ ರಾಜ್ಯ ಪುರಸ್ಕಾರ ಪ್ರಶಸ್ತಿ

ದಿನಾಂಕ 20-02-2016 ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಇದರ ಸಹಯೋಗದಲ್ಲಿ ಗಾಜಿನಮನೆ, ರಾಜಭವನ, ಬೆಂಗಳೂರು ಇಲ್ಲಿ ನಡೆದ 2015-16 ನೇ ಸಾಲಿನ ಚತುರ್ಥ ಚರಣ್ ಕಬ್ಸ್, ರಾಜ್ಯ ಪುರಸ್ಕಾರ ಸ್ಕೌಟ್ಸ್ ಮತ್ತು ಗೈಡ್ಸ್‌ಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಇದರಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 13 ಸ್ಕೌಟ್ಸ್ 9 ಗೈಡ್ಸ್‌ಗಳು ಮತ್ತು ಒಬ್ಬ ಕಬ್ ವಿದ್ಯಾರ್ಥಿ ಭಾಗವಹಿಸಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ವಾಜುಬಾಯಿ ರೂಡಾಬಾಯಿ ವಾಲಾ ಇವರಿಂದ ರಾಜ್ಯ ಪುರಸ್ಕಾರ ಪ್ರಶಸ್ತಿ ಪಡೆದಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

20160220_171337