QR Code Business Card

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ  ಸುಜ್ಞಾನ ಪುಸ್ತಕ ಜಾಥಾ – 2015

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇದರ ಆಶ್ರಯದಲಿ ಪುಸ್ತಕ ಸಪ್ತಾಹ ಕಾರ್ಯಕ್ರಮದ ಸುಜ್ಞಾನ ಪುಸ್ತಕ ಜಾಥಾ – 2015 ಜಾಥಾ ಪುತ್ತೂರು ನಗರದಲ್ಲಿ ಫೆಬ್ರವರಿ 19 ರಂದು ನಡೆಯಿತು. ಸುಜ್ಞಾನ ಜಾಥಾವನ್ನು ಹಿರಿಯ ವಿದ್ಯಾರ್ಥಿ ಅಶ್ವಿನ್ ರೈ ಶಾರದ ಮಾತೆಗೆ ಪುಸ್ತಕ ಅರ್ಪಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮುಖ್ಯಗುರು ಸತೀಶ್ ಕುಮಾರ್ ರೈ, ಹಿರಿಯ ಶಿಕ್ಷಕಿ ಮೋಹಿನಿ, ವಿದ್ಯಾರತ್ನ, ಸುಗೀತ ರೈ, ಜಗನ್ನಾಥ್, ರಾಜಶೇಖರ್, ರಾಜ್‌ಕುಮಾರ್, ಚಂದ್ರಶೇಖರ್, ಶೈನಿ ಕೆ.ಜೆ, ರಾಜೇಶ್, ಪ್ರತಿಮಾ, ಸುಧಾಕರ ಉಪಸ್ಥಿತರಿದ್ದರು.

DSCN2526

DSCN2520

DSCN2521

DSCN2536
ಜಾಥವು ನಗರದುದ್ದಕ್ಕೆ ಸಾಗಿ ದರ್ಬೆ, ಏಳ್ಮುಡಿ, ಎ.ಪಿ.ಎಂ.ಸಿ, ನೆಲ್ಲಿಕಟ್ಟೆ, ಮುಖ್ಯರಸ್ತೆ ಮತ್ತು ಬೊಳ್ವಾರು, ಮಂಜಲ್ಪಡ್ಪು, ನಗರ, ಮುರ ಹಾಗೂ ವಿವೇಕಾನಂದ ಕಾಲೇಜು ಆವರಣದಲ್ಲಿ ಸಾಗಿತು. ಹಲವಾರು ವಿದ್ಯಾಭಿಮಾನಿಗಳು ಪುಸ್ತಕಗಳನ್ನು ಶಾಲಾ ಲೈಬ್ರೆರಿಗೆ ಶಾರದ ಮಾತೆಗೆ ಅರ್ಪಿಸುವುದರ ಮೂಲಕ ಜಾಥ ಯಶಸ್ವಿಗೊಳಿಸಿದರು.