QR Code Business Card

ಸ್ವಚ್ಛತಾ ಜಾಗೃತಿ ಜಾಥಾ

ವಿವೇಕಾನಂದ ಆಂಗ್ಲ ಮಾಧ್ಯಮಾ ಶಾಲಾ ವಿದ್ಯಾರ್ಥಿಗಳು ಗಾಂಧಿ ಜಯಂತಿ ಹಾಗೂ ಸ್ವಚ್ಛತಾ ಆಂದೋಲನದ ಅಂಗವಾಗಿ ಸ್ವಚ್ಛತಾ ಜಾಗೃತಿ ಜಾಥಾವನ್ನು ಹಮ್ಮಿಕೊಂಡಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಘೋಷಣಾ ಫಲಕ ನೀಡಿ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾವು ಶಾಲಾ ಆವರಣದಿಂದ ಹೊರಟು ಗುರುಭವನ, ವಿಕಾಸ ಸೌಧ, ಜೈನ ಭವನ ಮಾರ್ಗವಾಗಿ ಸಾಗಿ ಬಪ್ಪಳಿಗೆ ಕ್ರಾಸ್ ಮೂಲಕ ಬೈಪಾಸ್ ರಸ್ತೆಯಲ್ಲಿ ಶಾಲೆಗೆ ತಲುಪಿತು. ಜಾಥಾ ಸಮಯದಲ್ಲಿ ರಸ್ತೆ ಬದಿಯಲ್ಲಿ ಇದ್ದ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯಗಳನ್ನು ಸಂಗ್ರಹಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಯಿತು.

DSC03594

IMG-20151002-WA0045

DSC03597

DSC03599

IMG-20151002-WA0037

ಇದೇ ಸಂದರ್ಭದಲ್ಲಿ ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಿಕ್ಷಕರೊಂದಿಗೆ ಪುರಸಭಾ ವತಿಯಿಂದ ಒದಗಿಸಿದ್ದ ಸ್ವಚ್ಛತಾ ಜಾಗೃತಿ ಕರಪತ್ರಗಳನ್ನು ಪುರಸಭಾ ವ್ಯಾಪ್ತಿಯ ಮನೆ-ಮನೆಗಳಿಗೆ ಭೇಟಿ ನೀಡಿ ವಿತರಿಸಿದರು.

ಜೊತೆಗೆ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಶಿಕ್ಷಕ-ಶಿಕ್ಷಕೇತರರು ಸೇರಿ ಶಾಲಾ ಆವರಣ ಹಾಗೂ ಕೊಠಡಿಗಳನ್ನು ಸ್ವಚ್ಛಗೊಳಿಸಲಾಯಿತು. ಬಳಿಕ ಎಲ್ಲರಿಗೂ ಅವಲಕ್ಕಿ ಮತ್ತು ಮಜ್ಜಿಗೆ ನೀರು ವಿತರಿಸಲಾಯಿತು.