QR Code Business Card

ತಾಲೂಕು ಮಟ್ಟದ ಬಾಲಕರ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ

ದಿನಾಂಕ 25-08-2015ರಂದು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು, ಬುಶ್ರಾ ವಿದ್ಯಾಸಂಸ್ಥೆಗಳು ಕಾವು ಇದರ ಜಂಟಿ ಆಶ್ರಯದಲ್ಲಿ ನಡೆದ ಬಾಲಕರ ವಿಭಾಗದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳ ತ್ರೋಬಾಲ್ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದೆ ಮತ್ತು ಶ್ರೀಕೃಷ್ಣ ಪ್ರೌಢಶಾಲೆ, ಪಟ್ಟೆ-ಬಡಗನ್ನೂರು ಇಲ್ಲಿ ದಿನಾಂಕ ೦೯.೦೯.೨೦೧೫ರಂದು ನಡೆಯಲಿರುವ ಜಿಲ್ಲಾ ಮಟ್ಟದ ಪಂದ್ಯಾಟದಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ಸಾಗರ್, ಚೇತನ್, ಗಗನ್‌ದೀಪ್, ರವಿತ್, ತೇಜಸ್ ಕುಮಾರ್, ಸುನಾದ್, ಸಂಜನ್.ಜಿ.ಎಸ್, ವೈಶಾಖ್ ಕೃಷ್ಣ, ನಿರ್ಮಲ್.ಜಿ.ಪಿ, ನಿಶ್ಚಿತ್ ರೈ, ನಿತಿನ್ ಕುಮಾರ್, ನಿತಿನ್.ಕೆ.ಪಿ ಭಾಗವಹಿಸಿದ್ದರು ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

20150826_123936