ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆ ಇದರ ೨೦೧೪-೧೫ರ ವಿವೇಕಾನಂದ ವಿದ್ಯಾಸಂಸ್ಥೆಗಳ ಕ್ರೀಡಾಂಗಣ ವಿವೇಕನಗರ ತೆಂಕಿಲ ಪುತ್ತೂರು ಇದರ ಕ್ರೀಡಾಂಗಣದಲ್ಲಿ ನಡೆಯಿತು.
ತಾ. 1-9-2014 ನೇ ಸೋಮವಾರ ಬೆಳಿಗ್ಗೆ ೯.೩೦ಕ್ಕೆ ಶಾಲಾ ಸಭಾಂಗಣದಲ್ಲಿ ಕೊಂಕೋಡಿ ಪದ್ಮನಾಭ, ಅಧ್ಯಕ್ಷರು ಕ್ಯಾಂಪ್ಕೊ. ಲಿ. ಮಂಗಳೂರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಕ್ರೀಡೆ ದೈಹಿಕ ವ್ಯಾಯಾಮ ನೀಡುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಎಲ್ಲರೂ ಸಕ್ರೀಯವಾಗಿ ಭಾಗವಹಿಸಿ ಎಂದು ಶುಭ ನುಡಿದರು.
ಎಂ. ಓ. ಕುಳ್ಳೆಗೌಡ ತಾಲೂಕು ದಂಡಾಧಿಕಾರಿಗಳು, ಹಾಗೂ ತಹಶೀಲ್ದಾರರು ಪುತ್ತೂರು ಸಮಾರಂಭದ ಅಧ್ಯಕ್ಷತೆ ವಹಿಸಿ ಕ್ರೀಡೆಯ ಜೊತೆಗೆ ಅಧ್ಯಯನ ಕೂಡ ಪ್ರಾಮುಖ್ಯವಾದುದು ಕ್ರೀಡೆ ಮತ್ತು ಅಧ್ಯಯನ ಜೊತೆ ಜೊತೆಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿ ಸುರೇಂದ್ರ.ರೈ ಅಧ್ಯಕ್ಷರು, ಅಮೆಚೂರು ಕಬಡ್ಡಿ ಎಸೋಸಿಯೇಶನ್ ಪುತ್ತೂರು, ರವಿ ಮುಂಗ್ಲಿಮನೆ, ಅಧ್ಯಕ್ಷರು ಶಿಕ್ಷಕ ಮತ್ತು ರಕ್ಷಕ ಸಂಘ ವಿವೇಕಾನಂದ ಆಂಗ್ಲಮಾಧ್ಯಮ ಪುತ್ತೂರು, ಲೋಕಯ್ಯ.ಡಿ ಕಾರ್ಯದರ್ಶಿ ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾಕೂಟ, ಕರುಣಾಕರ.ಎಂ. ಜಿಲ್ಲಾ ದೈಹಿಕ ಶಿಕ್ಷಣ ಪ್ರಮುಖರು, ರವಿಂದ್ರ.ಪಿ. ಸಂಚಾಲಕರು ವಿವೇಕಾನಂದ ವಿದ್ಯಾಸಂಸ್ಥೆ ಪುತ್ತೂರು, ಅಚ್ಯುತ ನಾಯಕ್ ಖಜಾಂಜಿ ವಿವೇಕಾನಂದ ವಿದ್ಯಾಸಂಸ್ಥೆ ಪುತ್ತೂರು, ಶೋಭಾ ಕೋಳತ್ತಾಯ ಸದಸ್ಯರು ವಿವೇಕಾನಂದ ವಿದ್ಯಾಸಂಸ್ಥೆ ಪುತ್ತೂರು, ಡಾ. ಕೆ. ಎಂ ಕೃಷ್ಣ ಭಟ್ ಅಧ್ಯಕ್ಷರು ವಿವೇಕಾನಂದ ವಿದ್ಯಾಸಂಸ್ಥೆ ಪುತ್ತೂರು. ಸ್ವಾಗತಿಸಿದರು, ಸತೀಶ್.ರೈ ಮುಖ್ಯ ಗುರುಗಳು ವಂದಿಸಿ ಶಿಕ್ಷಕ ರಾಜೇಶ್ ನೆಲ್ಲಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನಿನ್ನೆ ನಿಧನರಾದ ಶ್ಯಾಮ ಶಾಸ್ತ್ರಿಯವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.