ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಶ್ರೀಮತಿ ಪುಷ್ಪಲತಾ ಹಿರಿಯ ಶಿಕ್ಷಕಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಇವರು ಸಭಾಧ್ಯಕ್ಷತೆ ವಹಿಸಿ ಮತನಾಡುತ್ತಾ ಶಿಕ್ಷಕರ ಜ್ಞಾನಕ್ಕೆ ಮಿತಿ ಇರದು. ಇಂದು ನೀವು ಮಾಡುವ ಚೊಕ್ಕಟವಾದ ಕೆಲಸ ಕೇವಲ ತರಗತಿ ಮತ್ತು ಪುಸ್ತಕಗಳಿಗೆ ಸೀಮಿತವಾಗಿರದೆ ವಿಶಾಲ ದೃಷ್ಟಿ ಕೋನದಲ್ಲಿ ಬೆಳೆಯಬೇಕು ಎಂದರು. ಶ್ರೀಮತಿ ಮೋಹಿನಿ ಹಿರಿಯ ಆಂಗ್ಲಭಾಷ ಶಿಕ್ಷಕಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಇವರು ಮುಖ್ಯ ಅತಿಥಿಯಾಗಿ, ಅಧ್ಯಾಪಕರು ವಿದ್ಯಾರ್ಥಿಗಳಿಗೆ ತತ್ವ ಆದರ್ಶಗಳನ್ನು ತುಂಬುವ ಮೂಲಕ ಸತ್ಪ್ರಜೆಗಳನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಹೊಂದಿದ್ದಾರೆ ಎಂದರು.
ಮುಖ್ಯಗುರು ಶ್ರೀ ಸತೀಶ್ ಕುಮಾರ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿ ಮಕ್ಕಳ ಚಟುವಟಿಕೆಯನ್ನು ಶ್ಲಾಘಿಸಿದರು. ಶಿಕ್ಷಕರುಗಳಿಗೆ ವಿವಿಧ ಕ್ರೀಡೆ, ಆಟೋಟ ಕಾರ್ಯಕ್ರಮವನ್ನು ಮಕ್ಕಳೇ ಸಂಘಟಿಸಿ ವೇದಿಕೆಯಲ್ಲಿ ಬಹುಮಾನ ವಿತರಿಸಿ ಗೌರವಿಸಿದರು. ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು. ೧೦ನೇ ತರಗತಿ ವಿದ್ಯಾರ್ಥಿನಿಯರಾದ ಶೃತಿ ಸ್ವಾಗತಿಸಿ, ಕೃತಿಕಾ ವಂದಿಸಿ, ಸಮನ್ವಿ ರೈ ಕಾರ್ಯಕ್ರಮ ನಿರ್ವಹಿಸಿದರು.