ದಿನಾಂಕ 06-12-2014 ರ ಶನಿವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಮಕ್ಕಳ ಸುರಕ್ಷಾ ಸಪ್ತಾಹ ಪ್ರತಿಜ್ಞೆ ಕಾರ್ಯಕ್ರಮದ ಅಂಗವಾಗಿ ಶಿಕ್ಷಕರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಮೇಡಂ ಮೋಹಿನಿಯವರು ಪ್ರತಿಜ್ಞೆಯನ್ನು ಹೇಳಿಸಿದರು.
ಶಾಲಾ ಮುಖ್ಯಗುರುಗಳು, ಬೋಧಕ ವೃಂದ ಹಾಗೂ ಬೋಧಕೇತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ದೈವೀಸ್ವರೂಪದ ಮಕ್ಕಳಿಗೆ ವಿದ್ಯೆ, ವಿನಯ, ವಿವೇಚನ, ವಿಜ್ಞಾನ, ಸುಜ್ಞಾನ ಕಲಿಸಿ ವಿಕಸಿತ ವ್ಯಕ್ತಿಗಳನ್ನಾಗಿ ಮಾಡುತ್ತೇನೆಂದು ಪ್ರತಿಜ್ಞೆ ಮಾಡಿದರು. ಶ್ರೀಮತಿ ಮಾಲಿನಿ ಕಾರ್ಯಕ್ರಮ ನಿರೂಪಿಸಿದರು.