ತಾಲೂಕು ಮಟ್ಟದ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆಯು ನವೆಂಬರ್ 22 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿಜ್ಞಾನ ಪ್ರಯೋಗಾಲಯದಲ್ಲಿ ನಡೆಯಿತು. ಶಶಿಧರ್.ಬಿ.ಎಸ್, ಶಿಕ್ಷಣಾಧಿಕಾರಿಗಳು ಪುತ್ತೂರು ಪ್ರಯೋಗಾಲಯದಲ್ಲಿ ನಡೆಯುವ ಪ್ರಯತ್ನಗಳು ನಮ್ಮ ಭೂಮಿ ಮತ್ತು ಸಮಾಜದಲ್ಲಿ ನಡೆಯಬೇಕು. ನಮ್ಮ ಪ್ರಯೋಗ, ಪರಿಶ್ರಮ, ಪ್ರಯತ್ನಗಳು ಸಾಮಾಜಿಕವಾಗಿರಲಿ, ಮತ್ತು ಕಾರ್ಯರೂಪಕ್ಕೆ ಬರಲಿ ಎಂದು ನುಡಿದರು. ಹರೀಶ್ ಶಾಸ್ತ್ರಿ ಭೌತಶಾಸ್ತ್ರ ಉಪನ್ಯಾಸಕರು ವಿವೇಕಾನಂದ ಕಾಲೇಜು ಪುತ್ತೂರು ಅತಿಥಿಗಳಾಗಿ ಆಗಮಿಸಿ ಬಹಳ ಹಿಂದೆ ಭಾರತ ಉಪಗ್ರಹ ಅಂತರಿಕ್ಷಕ್ಕೆ ಕಳುಹಿಸಿದಾಗ ಬಡವಾದ ಭಾರತಕ್ಕೆ ಇದರ ಅಗತ್ಯವಿದೆಯೇ ಎಂದ ಜನರು ಇಂದು ಇಸ್ರೋ ಮಂಗಳಯಾನ ಯಶಸ್ವಿಯಾಗಿ ನಡೆದಾಗ ಹೆಮ್ಮೆಪಟ್ಟರು. ಹೀಗೆ ಸಾಧನೆ ನಿರಂತರವಾಗಿರಬೇಕು ಎಂದರು.
ರವೀಂದ್ರ.ಪಿ, ಸಂಚಾಲಕರು ವಿವೇಕಾನಂದ ವಿದ್ಯಾಸಂಸ್ಥೆ ಪುತ್ತೂರು, ಪ್ರಾಸ್ತಾವಿಕವಾಗಿ ನುಡಿದರು. ವೇದಿಕೆಯಲ್ಲಿ ಶೋಭಾ ಕೊಳತ್ತಾಯ, ಸದಸ್ಯರು ವಿವೇಕಾನಂದ ವಿದ್ಯಾಸಂಸ್ಥೆ ಪುತ್ತೂರು, ಪ್ರಕಾಶ್.ಎಸ್.ಕೆ ಜೀವಶಾಸ್ತ್ರ ಉಪನ್ಯಾಸಕರು ವಿವೇಕಾನಂದ ಕಾಲೇಜು ಪುತ್ತೂರು, ಯಶವಂತ ಉಪನ್ಯಾಸಕರು ಸಂತ ಫಿಲೋಮಿನಾ ಕಾಲೇಜು ಪುತ್ತೂರು, ಸತೀಶ್ ಕುಮಾರ್ ರೈ ಮುಖ್ಯಗುರುಗಳು ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ಉಪಸ್ಥಿತರಿದ್ದರು.
ನಂತರ ವಿದ್ಯಾರ್ಥಿಗಳಿಂದ ರಚಿಸಿದ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಲಾಯಿತು. ಮುಖ್ಯಗುರುಗಳಾದ ಸತೀಶ್ ಕುಮಾರ್ ರೈ ಸ್ವಾಗತಿಸಿ, ಶಿಕ್ಷಕಿ ಶಾರದಾ ಶೆಟ್ಟಿ ವಂದಿಸಿದರು, ಶಿಕ್ಷಕಿ ಪೂರ್ಣಲತ ಕಾರ್ಯಕ್ರಮ ನಿರೂಪಿಸಿದರು.