ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದಲ್ಲಿ ರೋಟರ್ಯಾಕ್ಟ್ ಕ್ಲಬ್ ಸಿಟಿ ಪುತ್ತೂರು ಇವರು ತಾ. 24-03-2015 ರಂದು ಶಾಲೆಗೆ ಆಗಮಿಸಿ ಸುಜ್ಞಾನ ಪುಸ್ತಕ ಸಪ್ತಾಹಕ್ಕೆ ಹಲವು ಪುಸ್ತಕಗಳನ್ನು ದೇಣಿಗೆ ರೂಪದಲ್ಲಿ ನೀಡಿದರು.
ರೊಟೇರಿಯನ್ ಸುರೇಂದ್ರ ಕಿಣಿ, ಅಧ್ಯಕ್ಷರು ರೋಟರಿ ಕ್ಲಬ್ ಪುತ್ತೂರು ಸಿಟಿ ಇವರು ಮಾತನಾಡುತ್ತಾ ಸಾರ್ವಜನಿಕ ಸಂಸ್ಥೆಗಳಿಗೆ ಮತ್ತು ಶಾಲೆಗಳಿಗೆ ಸಾಮಾನ್ಯವಾಗಿ ಬೇಕಾಗುವ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ನಮ್ಮದು. ಆ ಸದುದ್ದೇಶದಿಂದ ವಿವೇಕಾನಂದದ ಗ್ರಂಥಾಲಯಕ್ಕೆ ಪುಸ್ತಕ ನೀಡಿದ್ದು, ಸಾರ್ವಜನಿಕರಿಗೆ ಅದರ ಸದುಪಯೋಗವಾಗಬೇಕೆಂಬುದು ನಮ್ಮ ಸದಾಶಯ ಎಂದು ಹೇಳಿ ಶಾಲಾ ಸಂಚಾಲಕರಾದ ರವೀಂದ್ರ. ಪಿ ಮತ್ತು ಮುಖ್ಯಗುರು ಸತೀಶ್ ಕುಮಾರ್ ರೈ ಅವರ ಮುಖಾಂತರ ಪುಸ್ತಕಗಳನ್ನು ಸಾಂಕೇತಿಕವಾಗಿ ದೇಣಿಗೆ ನೀಡಿದರು.
ಶಾಲಾ ಸಂಚಾಲಕರಾದ ರವೀಂದ್ರ. ಪಿ ಮಾತನಾಡುತ್ತಾ, ಪ್ರಬುದ್ಧರೆಂದೆ ಗುರುತಿಸಿಕೊಳ್ಳುವ ರೋಟರಿಯವರು ಹೃದಯವಂತರಾಗಿ ಇಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಓದುವ ಹವ್ಯಾಸದಿಂದ ಭಾವನಾತ್ಮಕತೆ ಬೆಳೆಯುತ್ತದೆ ಎಂದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ನಿಕಟಪೂರ್ವ ಅಧ್ಯಕ್ಷ ರೊಟೇರಿಯನ್ ಡಾ. ಶಶಿಧರ ಕಜೆ, ಭಾವಿ ಅಧ್ಯಕ್ಷ ರೊಟೇರಿಯನ್ ನಟೇಶ್ ಉಡುಪ, ಕಾರ್ಯದರ್ಶಿ ರೊಟೇರಿಯನ್ ಪ್ರಮೋದ್ ಮಲಾಲ್ ಮತ್ತು ಶಿಕ್ಷಕವೃಂದ ಉಪಸ್ಥಿತರಿದ್ದರು.
ಮುಖ್ಯಗುರು ಸತೀಶ್ ಕುಮಾರ್ ರೈಯವರು ಪ್ರಾಸ್ತಾವಿಕ ಮಾತುಗಳನ್ನಾಡಿ, ವಂದಿಸಿದರು.
ಶಿಕ್ಷಕ ಎನ್.ಸಿ. ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.