ದಿನಾಂಕ 27-06-2015 ನೇ ಶನಿವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇದರ 2015-16 ನೇ ಶೈಕ್ಷಣಿಕ ಸಾಲಿನ ಪ್ರಾಥಮಿಕ ವಿಭಾಗದ 1ನೇ ತರಗತಿ ವಿದ್ಯಾರ್ಥಿಗಳ ಹೆತ್ತವರ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಕೆ.ಎಂ.ಕೃಷ್ಣ ಭಟ್, ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ 1ನೇ ತರಗತಿಯಿಂದ 10ನೇ ತರಗತಿಯವರೆಗಿನ ಎಲ್ಲಾ ಮಕ್ಕಳು ಬೌದ್ಧಿಕ, ದೈಹಿಕ ಮತ್ತು ಮಾನಸಿಕ ವಿಕಸಿತತೆಯೇ ನಮ್ಮ ಉದ್ಧೇಶ ಎಂದರು. ಶಾಲಾ ಆಡಳಿತ ಮಂಡಳಿ ಸದಸ್ಯೆ ಡಾ.ಸುಲೇಖ ವರದರಾಜ್ ಮಾತನಾಡಿ ಜೀವನ ಕಲೆಯನ್ನು ಕಲಿಸುವುದು ಶಿಕ್ಷಣ. ಆದುದರಿಂದ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಪೋಷಕರ ಸಹಕಾರ ಅಗತ್ಯ ಎಂದರು.
ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಸತೀಶ್ ಕುಮಾರ್ ರೈ, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀ ರಾಮ ನಾಕ್, ಕೆ.ಜಿ.ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಮತಾ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ರವಿ ಮುಂಗ್ಲಿಮನೆ, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶ್ರೀಮತಿ ಸೌಮ್ಯಕುಮಾರಿ ಪ್ರಾರ್ಥಿಸಿ, ಶ್ರೀಮತಿ ಅಕ್ಷತಾ ಸ್ವಾಗತಿಸಿ, ಶ್ರೀಮತಿ ನವಿತಾ.ಪಿ.ಕೆ ವಂದಿಸಿದರು. ಶ್ರೀಮತಿ ಲತಾ ಕಾರ್ಯಕ್ರಮ ನಿರೂಪಿಸಿದರು.