ದಿನಾಂಕ 13-7-2015 ನೇ ಸೋಮವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇದರ 2015-16 ನೇ ಶೈಕ್ಷಣಿಕ ಸಾಲಿನ ಪ್ರಾಥಮಿಕ ವಿಭಾಗದ 5 ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಶ್ರೀ ತಾರಾನಾಥ ಸವಣೂರು ಇವರು ಮಾತನಾಡಿ ನಮ್ಮ ಮಕ್ಕಳನ್ನು ಇನ್ನೊಂದು ಮಗುವಿನೊಂದಿಗೆ ಹೋಲಿಸಬೇಡಿ. ಪೋಷಕರು ತಮ್ಮ ಜೀವನದ ಜಂಟಾಟದಲ್ಲಿ ದಿನದ ಒಂದು ಗಂಟೆಯನ್ನು ಮಕ್ಕಳೊಂದಿಗೆ ಕಳೆಯುವುದು ಮುಖ್ಯ. ಮಗು ಗಿಡವಿದ್ದಂತೆ ಅದರ ಮಾಲೀಕರು ಶಿಕ್ಷಕರು ಮತ್ತು ಪೋಷಕರು. ಗಿಡವೆಂಬ ಮಗುವಿಗೆ ಗೊಬ್ಬರವನ್ನು ಬೇಲಿಯನ್ನು ಹಾಕಿ ಬೆಳೆಸುವುದು ನಮ್ಮ ಕರ್ತವ್ಯ. ಆದರೆ ಅದು ಬೆಳೆದು ದೊಡ್ಡ ಹೆಮ್ಮರವಾದಾಗ ಅದರ ಮಹತ್ವ ಅರಿವಾಗುವುದು ಎಂದರು.
ಶಾಲಾ ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಶೋಭಾ ಕೊಳತ್ತಾಯ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಸತೀಶ್ ಕುಮಾರ್ ರೈ ಪೋಷಕರ ಸಮಸ್ಯೆ-ಸಲಹೆಗಳಿಗೆ ಉತ್ತರಿಸಿದರು. ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀ ರಾಮ ನಾಯ್ಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆಯಾದ ಶ್ರೀಮತಿ ಮಮತಾ.ಆರ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ರವಿ ಮುಂಗ್ಲಿಮನೆ, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕಿ ಕು| ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶ್ರೀಮತಿ ಶಾಂತಿ ವಂದಿಸಿದರು.