ದಿನಾಂಕ 18-07-2015 ನೇ ಶನಿವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇದರ 2015-16 ನೇ ಶೈಕ್ಷಣಿಕ ಸಾಲಿನ ಪೂರ್ವ ಪ್ರಾಥಮಿಕ ವಿಭಾಗದ [ಎಲ್.ಕೆ.ಜಿ ಮತ್ತು ಯು.ಕೆ.ಜಿ] ವಿದ್ಯಾರ್ಥಿಗಳ ಪೋಷಕರ ಸಭೆ ಮತ್ತು ಪೋಷಕರಿಗಾಗಿ ವಿಶೇಷ ಕಾರ್ಯಾಗಾರ ತೆಂಕಿಲದ ದರ್ಶನ್ ಕಲಾ ಮಂದಿರದಲ್ಲಿ ನಡೆಯಿತು. ಶ್ರೀ ಗೋಪಾಡ್ಕರ್, ಮುಖ್ಯಸ್ಥರು ಸ್ವರೂಪ್ ಮಕ್ಕಳ ಶಿಕ್ಷಣ ಅಧ್ಯಯನ ಕೇಂದ್ರ ಇವರು ಮಾತನಾಡಿ ಪೋಷಕರು ನಿಜವಾದ ಸಾಧಕರು. ನಾನು ಯಾರು? ನನ್ನನು ನಾನು ಏನೆಂದು ಮೊದಲು ಕಂಡುಕೊಂಡು ಎಲ್ಲವನ್ನು ನನ್ನದನ್ನಾಗಿಸಿಕೊಳ್ಳುವುದು ಹೇಗೆ? ಮತ್ತು ಅದರ ಬಳಕೆ ಮಾಡುವುದು ಯಾವ ರೀತಿ ಎಂದು ತಿಳಿಸಿದರು. ಆಡಳಿತ ಮಂಡಳಿ ಸದಸ್ಯೆ ಡಾ. ಸುಲೇಖಾ ವರದರಾಜ್ ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಒಂದೇ ನಾಣ್ಯದ ಮುಖಗಳು. ಪರಸ್ಪರ ಒಂದಕ್ಕೊಂದು ಪೂರಕವಾಗಿದ್ದಾಗ ಯಶಸ್ಸು ಸಾಧ್ಯ ಎಂದರು. ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಸತೀಶ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಡಾ. ಕೆ.ಎಮ್.ಕೃಷ್ನ ಭಟ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ರವಿ ಮುಂಗ್ಲಿಮನೆ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಗುರುಗಳಾದ ಶ್ರೀ ರಾಮ ನಾಕ್, ಕೆ.ಜಿ.ವಿಭಾಗದ ಮುಖ್ಯಸ್ಥೆಯಾದ ಶ್ರೀಮತಿ ಮಮತಾ.ಆರ್, ಉಪಸ್ಥಿತರಿದ್ದರು. ಶಿಕ್ಷಕಿ ರೂಪಿಕಾ ಪ್ರಾರ್ಥಿಸಿದರು. ಶಿಕ್ಷಕಿ ರಮ್ಯ ಸ್ವಾಗತಿಸಿ, ಶಿಕ್ಷಕಿ ಪ್ರತಿಮಾ ವಂದಿಸಿ, ಶಿಕ್ಷಕ ಗಣೇಶ್ ಏತಡ್ಕ ಕಾರ್ಯಕ್ರಮ ನಿರೂಪಿಸಿದರು. ೩೬೨ಕ್ಕೂ ಮಿಕ್ಕಿ ಪೋಷಕರು ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.