ಪುತ್ತೂರಿನ ಶಿಕ್ಷಣ ಕ್ಷೇತ್ರದಲ್ಲಿ ಪ್ರಪಥಮವಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ BASE ಸಂಸ್ಥೆಯಿಂದ I.I.T. ತರಬೇತಿಯ ಉದ್ಟಾಟನೆ
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ “Base” Bangalore ನ ಸಂಸ್ಥೆಯಿಂದ I.I.T. course Pre-foundation ತರಬೇತಿಯ ಉದ್ಘಾಟನಾ ಸಮಾರಂಭ ಜುಲೈ 27 ರಂದು ನಡೆಯಿತು. ದೇಶದಲ್ಲಿರುವ ಪ್ರತಿಷ್ಟಿತ ಪ್ರವೇಶ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ತಯಾರು ಮಾಡುವ ಒಂದು ತರಬೇತಿಯಾಗಿದೆ. ಸೀತಾರಾಮ ಕೇವಳ, ಪ್ರಾಂಶುಪಾಲರು, ವಿದ್ಯಾರಶ್ಮಿ ಸಮೂಹ ಸಂಸ್ಥೆ ಸವಣೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಜೀವನದ ಪ್ರತಿಕ್ಷಣ, ಪ್ರತಿ ನಿಮಿಷ, ಪ್ರತಿ ಸಮಯವು ಸ್ಪರ್ಧೆಯನ್ನು ಎದುರಿಸುತ್ತದೆ. ಗೆಲುವಿಗೆ ನಿರಂತರ ಓಟ ಒಂದೇ ಮಾರ್ಗ. ಮಗು ಗರ್ಭಾವಸ್ಥೆಯಲ್ಲಿರುವಾಗಲೇ ಶಿಕ್ಷಣ ನೀಡಬೇಕಾದ ಕಾಲದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸೂಕ್ತ ನಿರ್ಧಾರವನ್ನೇ ಮಾಡಿದೆ ಎಂದರು. ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ ರೈ ಹಿಂದಿನ ಕಾಲದಲ್ಲಿ ಇದ್ದ ಶಿಕ್ಷಣ ವ್ಯವಸ್ಥೆಯಲ್ಲಿ ಉನ್ನತ ಶೈಕ್ಷಣಿಕ ವ್ಯವಸ್ಥೆಗೆ ಕಾಲಿಡುವವರು 5 ಅಥವಾ 6 ಜನ. ಆದರೆ ಇವತ್ತು ಪ್ರತಿ ಮಗುವಿಗೂ ಶಿಕ್ಷಣ ದೊರೆಯುದರಿಂದ ಇಂತಹ ತರಬೇತಿಗಳು ಅರ್ಥಪೂರ್ಣವಾದುದು ಎಂದರು.
ವೇದಿಕೆಯಲ್ಲಿ ಚನಿಲ ತಿಮ್ಮಪ್ಪ ಶೆಟ್ಟಿ, ಉಪಾಧ್ಯಕ್ಷರು ವಿವೇಕಾನಂದ ವಿದ್ಯಾರ್ಧಕ ಸಂಘ, ಪುತ್ತೂರು(ರಿ.), ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಕೆ.ಎಂ.ಕೃಷ್ಣ ಭಟ್, ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ರವೀಂದ್ರ.ಪಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ರವಿ ಮುಂಗ್ಲಿಮನೆ, ಶಾಲಾ ಆಡಳಿತ ಮಂಡಳಿ ಸದಸ್ಯರಾದ ಡಾ.ಸುಲೇಖಾ ವರದರಾಜ್ ಹಾಗೂ ಶ್ರೀಮತಿ ಶೋಭಾ ಕೊಳತ್ತಾಯ, ಶೇಷ ಸಾಯಿ, ಕಾಂಟ್ರೋಲ್ ಮೇನೆಜರ್, ಬೇಸ್ ತರಬೇತಿ ಕೇಂದ್ರ, ಬೆಂಗಳೂರು, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಾಮ ನಾಕ್ ಉಪಸ್ಥಿತರಿದ್ದರು. ಶಿಕ್ಷಕ ರಾಜಶೇಖರ್ ಸ್ವಾಗತಿಸಿ, ಶಿಕ್ಷಕಿ ಸಿಂಧು ವಂದಿಸಿ, ಶಿಕ್ಷಕಿ ರೇಖಾ ಕಾರ್ಯಕ್ರಮ ನಿರೂಪಿಸಿದರು.