ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಇದರ 9 ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆಯು ಶಾಲಾ ಸಭಾಂಗಣದಲ್ಲಿ ಜುಲೈ 29 ರಂದು ನಡೆಯಿತು.
ಶ್ರೀ ಪ್ರಶಾಂತ್, ಗಣಿತ ಉಪನ್ಯಾಸಕರು ವಿವೇಕಾನಂದ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜು, ಪುತ್ತೂರು, ಇವರು ಮಾತನಾಡಿ ಹೆತ್ತವರು ಶಿಕ್ಷಕರು, ಆಡಳಿತ ಮಂಡಳಿ, ಮಕ್ಕಳು ಇವು ನಾಲ್ಕು ಶಿಕ್ಷಣ ವ್ಯವಸ್ಥೆಯ ಆಧಾರ ಸ್ತಂಭಗಳು. ಮಕ್ಕಳ ಬೆಳವಣಿಗೆ ಹೆತ್ತವರ ಮನೋಭಾವನೆ ಬದಲಾವಣೆ ಅಗತ್ಯ ಪ್ರೌಢ ಹಂತದಲ್ಲಿ ಮಕ್ಕಳನ್ನು ಸುಲಭವಾಗಿ ತಿದ್ದಿ-ತೀಡಿ ಪರಿಪಕ್ವ ಮಾಡಬಹುದು ಎಂದರು. ಸತೀಶ್ ಕುಮಾರ್ ರೈ, ಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ರವಿ ಮುಂಗ್ಲಿಮನೆ, ಅಧ್ಯಕ್ಷರು ಶಿಕ್ಷಕ – ರಕ್ಷಕ ಸಂಘ, ರಾಮನಾಕ್ ಮುಖ್ಯೋಪಾಧ್ಯಾಯರು ಪ್ರಾಥಮಿಕ ವಿಭಾಗ, ಮಮತಾ ಬಿ. ಕೆ.ಜಿ.ವಿಭಾಗದ ಮುಖ್ಯಸ್ಥೆ, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕಿ ವೀಣಾ ಜೋಷಿ ಸ್ವಾಗತಿಸಿ, ಶಿಕ್ಷಕ ವೆಂಕಟೇಶ್ ಪ್ರಸಾದ್ ವಂದಿಸಿ, ಶಿಕ್ಷಕಿ ಅನುರಾಧ ಕಾರ್ಯಕ್ರಮ ನಿರೂಪಿಸಿದರು.