QR Code Business Card

ತಾಲೂಕು ಮಟ್ಟದ ಪುಟ್‌ಬಾಲ್ ಪಂದ್ಯಾಟ

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಇದರ ಜಂಟಿ ಆಶ್ರಯದಲ್ಲಿ ದಿನಾಂಕ 7-9-2015 ರಂದು ವಿವೇಕಾನಂದ ಶಾಲಾ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪುಟ್‌ಬಾಲ್ ಪಂದ್ಯಾಟವು ನಡೆಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಡಾ.ಕೆ.ಎಂ.ಕೃಷ್ಣ ಭಟ್ ವಹಿಸಿ ಮಾತಾಡಿ ಸಾವಿರ ಪುಸ್ತಕ ಓದುವುದರ ಬದಲು ಒಂದು ಪುಟ್‌ಬಾಲ್ ಆಟವನ್ನು ಆಡು ಎಂಬ ವಿವೇಕಾನಂದರ ಮಾತು ನೆನಪಿಸಿದರು. ಪುಟ್‌ಬಾಲ್ ಆಟದಿಂದ ಸಮಯ ಪಾಲನೆ, ಶಿಸ್ತು, ಚಾಕಚಕ್ಯತೆಯನ್ನು ಕಲಿಯಬಹುದು ಎಂದರು.

DSCF4974

ಡಾ.ದಿನೇಶ್ಚಂದ್ರ, ಪ್ರಾಂಶುಪಾಲರು ವಿವೇಕಾನಂದ ಬಿ.ಎಡ್ ಕಾಲೇಜು, ಮುಖ್ಯ ಅತಿಥಿಯಾಗಿ ಮಾತನಾಡಿ ಆಟವನ್ನು ಛಾಲೆಂಜ್ ಆಗಿ ಸ್ವೀಕರಿಸಿ, ಕಠಿಣ ಪರಿಶ್ರಮದಿಂದ ಯಶಸ್ಸು ಸಿಗಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ಸುಂದರ ಗೌಡ, ದೈಹಿಕ ಶಿಕ್ಷಣ ಪರಿವೀಕ್ಷಕರು, ಪುತ್ತೂರು, ದಯಾನಂದ ರೈ, ಕಾರ್ಯದರ್ಶಿ ಅಮೆಚೂರು ಕಬಡ್ಡಿ ಆಸೋಸಿಯೇಶನ್, ಅನಿಲ್ ತೆಂಕಿಲ, ಉಪಾಧ್ಯಕ್ಷರು, ರಕ್ಷಕ-ಶಿಕ್ಷಕ ಸಂಘ, ನಳಿನಿ ವಾಗ್ಲೆ, ಮುಖ್ಯೋಪಾಧ್ಯಾಯಿನಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ರಾಮ ನಾಕ್, ಮುಖ್ಯೋಪಾಧ್ಯಾಯರು ಪ್ರಾಥಮಿಕ ವಿಭಾಗ ಉಪಸ್ಥಿತರಿದ್ದರು. ಸತೀಶ್ ಕುಮಾರ್ ರೈ ಮುಖ್ಯೋಪಾಧ್ಯಾಯರು ಸ್ವಾಗತಿಸಿ, ದೈಹಿಕ ಶಿಕ್ಷಕ ಭಾಸ್ಕರ್ ಗೌಡ ವಂದಿಸಿದರು. ದೈಹಿಕ ಶಿಕ್ಷಕ ಗಿರೀಶ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.