ದಿನಾಂಕ 02-10-2015 ನೇ ಶುಕ್ರವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ವಿಶ್ವೇಶ್ವರ ಭಟ್ ಬಂಗಾರಡ್ಕರವರು ತಮ್ಮ ಮಾತಿನಲ್ಲಿ ಪ್ರತಿ ದೇಶವು ಮುನ್ನಡೆಯಬೇಕಾದರೆ ಸಮರ್ಥ ನಾಯಕ್ವದ ಅಗತ್ಯವಿದೆ. ಅಂದು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಸಮರ್ಥ ನಾಯಕ್ವದಿಂದ ದೇಶ ಸ್ವಾತಂತ್ರ್ಯವಾಯಿತು. ಹಾಗೆ ಇಂದು ನಮ್ಮ ದೇಶದ ಸಾರ್ವಭೌಮತೆಯನ್ನು ಇಡೀ ವಿಶ್ವದಾದ್ಯಾಂತ ಪಸರಿಸಿರುವ ನರೇಂದ್ರ ಮೋದಿಯವರ ನಾಯಕ್ವದ ಕಾರಣ ಭಾರತವಿಂದು ವಿಶ್ವ ಅಭಿವಂದ್ಯ ದೇಶವಾಗಿದೆ. ಅಂತಹ ನಾಯಕರು ಇನ್ನೂ ಹುಟ್ಟಿ ಬರಲಿ ಎಂದು ಹೇಳಿದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ವಿ.ಜಿ.ಭಟ್ ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ಪ್ರತಿ ಮನಮನೆಗಳು ಸ್ವಚ್ಛವಾದರೆ ನಮ್ಮ ದೇಶ ಸ್ವಚ್ಛವಾಗುವುದು ಎಂದು ಹೇಳಿದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿ, ರಘುಪತಿ ರಾಘವ ರಾಜಾರಾಮ್ ಹಾಡನ್ನು ಹಾಡಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಸ್ವಾಗತಿಸಿ, ಶಿಕ್ಷಕರಾದ ವೆಂಕಟೇಶ್ ಪ್ರಸಾದ್ ವಂದಿಸಿ, ಶಿಕ್ಷಕರಾದ ಗಣೇಶ್ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.