ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಮತ್ತು ವಿಕಾಸ ಪ್ರೌಢ ಶಾಲೆ, ಆಲ್ಕೊಳ,ಶಿವಮೊಗ್ಗ ಜಿಲ್ಲೆ ಇಲ್ಲಿ ನಡೆದ ದಕ್ಷಿಣ ಕ್ಷೇತ್ರೀಯ ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ನಾಲ್ಕು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ಸ್ವಸ್ತಿಕ್ ಪದ್ಮ ಮತ್ತು ನಿಶ್ಚಿತ್ ರೈ ಕಿಶೋರ ವರ್ಗದಲ್ಲಿ ಪ್ರಥಮ ಸ್ಥಾನ ಪಡೆದರೆ, ಬಾಲವರ್ಗದಲ್ಲಿ ಧ್ಯಾನ್ ಮತ್ತು ವಿಕ್ರಮ ಆಳ್ವ ಪ್ರಥಮ ಸ್ಥಾನ ಪಡೆದರು. ಇವರು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿರುವರು. ರಕ್ಷಿತಾ ವಿಜ್ಞಾನ ಪತ್ರವಾಚನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾಳೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
ನಿಶ್ಚಿತ್ ರೈ – ಪುತ್ತೂರು ವೇಣುಗೋಪಾಲ ರೈ ಹಾಗೂ ಸುಗೀತಾ ರೈ ಇವರ ಪುತ್ರ, ಸ್ವಸ್ತಿಕ್ ಪದ್ಮ – ಶ್ರೀರಾಮ ಭಟ್ ಹಾಗೂ ಮಲ್ಲಿಕಾ ಭಟ್ ಮೂರ್ಕಾಜೆ ಇವರ ಪುತ್ರ, ಧ್ಯಾನ್ -ಶ್ರೀನಾಥ್ ಹಾಗೂ ಶಾಂತಿ ಪುತ್ತೂರು ಇವರ ಪುತ್ರ, ಹಾಗೂ ವಿಕ್ರಮ್ ಆಳ್ವ- ಕೃಷ್ಣಪ್ರಸಾದ್ ಆಳ್ವ ಪುತ್ತೂರು ಇವರ ಪುತ್ರ.