ದಿನಾಂಕ 20-11-2015 ನೇ ಶುಕ್ರವಾರದಂದು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ, ತೆಂಕಿಲ ಇದರ ಸಭಾಂಗಣದಲ್ಲಿ ವಿವೇಕಾನಂದ ಕ್ಲಸ್ಟರ್ ಮಟ್ಟದ ಶಿಕ್ಷಕರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮ ನಡೆಯಿತು.
ಮಂಗಳೂರು ಜ್ಞಾನ ಆಕಾಡೆಮಿ ಅಭಿಜ್ಞಾ ಟ್ರಸ್ಟ್ ಇದರ ಪ್ರಸಾದ್ ಗುರೂಜಿ ಮತ್ತು ಭಾರತಿಪ್ರಸಾದ್ ಗುರೂಜಿ ತರಬೇತಿ ನಡೆಸಿಕೊಟ್ಟರು.
ಪ್ರಸಾದ್ ಗುರೂಜಿ ತರಬೇತಿಯಲ್ಲಿ ಹಿಂದೂ ಧರ್ಮದ ಪರಿಕಲ್ಪನೆ, ಧಾರ್ಮಿಕ ವಿಚಾರ, ಯೋಗ, ಹಿಂದೂ ಆಹಾರ ಪದ್ಧತಿಯ ಬಗ್ಗೆ ವಿವರಿಸಿದರು. ನಾವು ಕಿವಿಯಲ್ಲಿ ಆಲಿಸಿದ ವಿಚಾರ ಹಾಗೂ ಅನುಭವವನ್ನು ಅರಿವಿನಲ್ಲಿರಿಸಿದ್ದೇ ನಿಜವಾದ ಸಾಧನೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ರಘುರಾಜ್ ಉಬರಡ್ಕ, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ಮಮತಾ.ಆರ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಸ್ಥ ಶ್ರೀ ರಾಮ ನಾಕ್ ಕಾರ್ಯಕ್ರಮ ನಿರ್ವಹಿಸಿದರು. ತರಬೇತಿಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತಕ್ಕೊಳಪಟ್ಟ ವಿದ್ಯಾಸಂಸ್ಥೆಗಳ ಸುಮಾರು 125 ಶಿಕ್ಷಕರು ಭಾಗವಹಿಸಿದರು.