QR Code Business Card

ಪೂರ್ವ ಪ್ರಾಥಮಿಕ ವಿಭಾಗದ ಪ್ರತಿಭಾ ಪುರಸ್ಕಾರ ದಿನ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇದರ 2015-16 ನೇ ಸಾಲಿನ ಪೂರ್ವ ಪ್ರಾಥಮಿಕ ವಿಭಾಗದ ಪ್ರತಿಭಾ ಪುರಸ್ಕಾರದ ಉದ್ಘಾಟನಾ ಕಾರ್ಯಕ್ರಮವು ಸ್ವಾಮಿ ಕಲಾ ಮಂದಿರದ ಸಭಾ ಭವನದಲ್ಲಿ ಡಿಸೆಂಬರ್ 2 ರಂದು ನಡೆಯಿತು.

inspire2

inspire3

inspire1

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾ ಸಂಸ್ಥೆಗಳ ಸದಸ್ಯರಾದ ರೂಪಲೇಖಾ ಮಾತನಾಡಿ, ಮಗು ಕೇಂದ್ರಿತ ಶಿಕ್ಷಣ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಾಗಬೇಕು. ಮಗುವಿನ ಆಸಕ್ತಿಯ ವಿಷಯವನ್ನು ಅರಿತುಕೊಂಡು ಶಿಕ್ಷಣ ನೀಡುವುದು ಹೆತ್ತವರ ಆದ್ಯ ಕರ್ತವ್ಯವಾಗಬೇಕು ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಯೋಜಕರಾದ ರಘುರಾಜ್ ಉಬರಡ್ಕ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಸಿಗಬೇಕು. ಹಿಂದಿನ ಕಾಲದ ಕೂಡು ಕುಟುಂಬದಲ್ಲಿರುವ ಸಂಸ್ಕಾರದ ಕೊರತೆಯಿಂದ ನಿಜವಾದ ಶಿಕ್ಷಣ ದೊರಕದಿರುವುದು ದುಃಖಕರ ಎಂದರು. ಆದುದರಿಂದ ಎಲ್ಲರೂ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಹೆತ್ತವರ ಪಾತ್ರ ಬಹಳ ದೊಡ್ಡದು ಎಂದರು.

ವೇದಿಕೆಯಲ್ಲಿ ಗೀತಾ ಪಾರ್ವತಿ, ಪ್ರಾಥಮಿಕ ವಿಭಾಗದ ಮುಖ್ಯಗುರು ರಾಮ ನಾಕ್, ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಮಮತಾ ಉಪಸ್ಥಿತರಿದ್ದರು. ಶಿಕ್ಷಕಿ ರೂಪಲಕ್ಷ್ಮಿ ಸ್ವಾಗತಿಸಿ, ಸಪ್ನಾ ವಂದಿಸಿ, ಪ್ರತಿಮಾ ಕಾರ್ಯಕ್ರಮ ನಿರ್ವಹಿಸಿದರು.