QR Code Business Card

ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ ಪುತ್ತೂರು ಮತ್ತು ಡಿ.ಎಸ್.ಇ.ಆರ್.ಟಿ. ಬೆಂಗಳೂರು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ 6 ತಂಡಗಳು ಭಾಗವಹಿಸಿ 4  ತಂಡಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಸ್ವಸ್ಥಿಕ್ ಪದ್ಮ (ಶ್ರೀರಾಮ್ ಭಟ್ ಮತ್ತು ಮಲ್ಲಿಕಾರವರ ಪುತ್ರ), ಮತ್ತು ಧ್ಯಾನ್ (ದಿನೇಶ್ ಮತ್ತು ಲತಾ ಇವರ ಪುತ್ರ) ಕಾರ್ಖಾನೆ ನಿರ್ವಹಣೆ ವಿಷಯದಲ್ಲಿ ಪ್ರಥಮ, ವಿಷ್ಣುಕೀರ್ತಿ (ಶ್ರೀಧರ್ ನಾಕ್ ಇವರ ಪುತ್ರ) ತುಷಾರ್ ಗೋಪಾಲ್ (ಶ್ರೀ ರವಿ ಕೃಷ್ಣ ಕಲ್ಲಾಜೆ ಮತ್ತು ಅನುಪಮ ರವಿ ಇವರ ಪುತ್ರ) ಪ್ರಾಕೃತಿಕ ವಿಕೋಪ ನಿರ್ವಹಣೆ ವಿಷಯದಲ್ಲಿ ಪ್ರಥಮ, ಗಣಿತದ ಮಾದರಿ ಪ್ರದರ್ಶನದಲ್ಲಿ ಪ್ರತೀಕ್ಷಾ (ಕೃಷ್ಣರಾಜ್ ಮತ್ತು ವಿದ್ಯಾ ಕೃಷ್ಣರಾಜ್) ಮತ್ತು ಅನರ್ಘ್ಯಾ ಪಿ. ನಾಡಿಗ್ (ಎನ್.ಕೆ.ಪ್ರಸನ್ನ ಕುಮಾರ್ ಮತ್ತು ಡಾ| ಸಂಗೀತಾ ಪಿ.ವಿ ಇವರ ಪುತ್ರಿ) ಪ್ರಥಮ, ಕೃಷಿ ವಿಷಯದಲ್ಲಿ ಶಮಂತ್ ರೈ (ದೇರ್ಲ ಹರೀಶ್ ರೈ, ಕವಿತಾ ಎಚ್. ರೈ ದಂಪತಿಯ ಪುತ್ರ) ಮತ್ತು ಅಕ್ಷಯ್ ಸುಬ್ರಹ್ಮಣ್ಯ (ವಕೀಲ ಶ್ರೀ ಶಿವಪ್ರಸಾದ್. ಇ ಮತ್ತು ಗೀತಾ ಪಾರ್ವತಿ ದಂಪತಿಯ ಪುತ್ರ) ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Science-fair

ಆಹಾರ ಮತ್ತು ಪೋಷಕಾಂಶ ವಿಷಯದಲ್ಲಿ ಶ್ರವಣ್ ಪಿ (ಪ್ರವೀಣ್ ಪಿ ಮತ್ತು ಆಶಾ. ಪಿ) ಮತ್ತು ಪ್ರಣವ್ ವಿ.ಜಿ. (ಪ್ರೊ. ವಿ.ಜಿ.ಭಟ್ ರವರ ಪುತ್ರ) ಹಾಗೂ ನೈಸರ್ಗಿಕ ಸಂಪನ್ಮೂಲ ವಿಷಯದಲ್ಲಿ ಪ್ರಜ್ವಲ್ (ಪ್ರಕಾಶ್ ಪಿ ಮತ್ತು ಮಂಜುಳಾ) ಮತ್ತು ಧನುಷ್ (ಟಿ. ರಾಮಕೃಷ್ಣ ನಾಕ್ ಮತ್ತು ಪುಷ್ಪಾವತಿ ಇವರ ಪುತ್ರ) ಭಾಗವಹಿಸಿ ಪ್ರಶಂಸೆ ಗಳಿಸಿದ್ದಾರೆ. ಪ್ರೌಢಶಾಲಾ ಶಿಕ್ಷಕರ ವಿಭಾಗದಲ್ಲಿ ಪಾಠೋಪಕರಣ ತಯಾರಿ ಸ್ಪರ್ಧೆಯಲ್ಲಿ ಶ್ರೀ ವಾಮನದಾಸ್ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಾಲಾ ವಿಜ್ಞಾನ ಅಧ್ಯಾಪಕಿಯರಾದ ಶ್ರೀಮತಿ ಶಾರದಾ ಶೆಟ್ಟಿ, ಶ್ರೀಮತಿ ಸುಗೀತಾ ರೈ, ಶ್ರೀಮತಿ ಸಂಧ್ಯಾ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮಾದರಿಯನ್ನು ಪ್ರಸ್ತುತ ಪಡಿಸಿರುತ್ತಾರೆ. ವಿವೇಕಾನಂದ ಪಾಲಿಟೆಕ್ನಿಕ್‌ನ ಉಪನ್ಯಾಸಕ ಶ್ರೀ ರವಿರಾi ಅವರು ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿರುತ್ತಾರೆ.