ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 21-06-2016 ರಂದು ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಸುಶ್ರುತ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರವಿಶಂಕರ ಪೆರುವಾಜೆ ಉದ್ಘಾಟಿಸಿ, ಯೋಗ ಎಂದರೆ ಜೋಡಿಸು ಎಂದರ್ಥ. ಆತ್ಮ, ಮನಸ್ಸು, ಇಂದ್ರಿಯ, ಇಂದ್ರಿಯಾರ್ಥಗಳನ್ನು ಜೋಡಿಸುವುದೇ ಯೋಗ. ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಯೋಗ ಅವಶ್ಯಕವಾದುದು. ಇಂದ್ರಿಯ ನಿಗ್ರಹ ಮತ್ತು ಇತರ ಯಾವುದೇ ಕ್ರಿಯೆ ಮನಃಪೂರ್ವಕವಾಗಿ ಮಾಡಿದಾಗ ಯೋಗಕ್ರಿಯೆ ಸಮರ್ಪಕವೆನಿಸುತ್ತದೆ.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಂ.ಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ಪ್ರಮುಖ್ ಶ್ರೀ ಜಯರಾಮರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಸಾಮೂಹಿಕ ಸರಸ್ವತಿ ವಂದನೆಯಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶ್ರೀಮತಿ ಶಾಂತಿ ಸ್ವಾಗತಿಸಿ, ಶ್ರೀಮತಿ ಭಾರತಿ ಎಸ್.ಎ. ವಂದಿಸಿದರು. ಶ್ರೀ ವೆಂಕಟೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.