ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು, ಇದರ 5ನೇ ತರಗತಿ ವಿದ್ಯಾರ್ಥಿಗಳ ವರ್ಷದ ಮೊದಲ ಪೋಷಕರ ಸಭೆಯು ದಿನಾಂಕ 30-6-2016 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಪುಣಚ ಶ್ರೀದೇವಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಗಂಗಮ್ಮ ಮಾತಾಜಿ ಕಾರ್ಯಕ್ರಮವನ್ನು ಉದ್ದೇಶಿಸಿ ಹೆತ್ತವರ ಮತ್ತು ಶಿಕ್ಷಕರ ಬಾಂಧವ್ಯ ಬೆಳೆಯಲು ಪೋಷಕರ ಸಭೆ ಸಹಕಾರಿ. ದೇಶದ ಬುನಾದಿ ಇರುವುದು ಶಿಕ್ಷಣದ ಮೇಲೆ. ಶಿಕ್ಷಕರು ಹೆತ್ತವರು ಮಕ್ಕಳಲ್ಲಿ ಪ್ರೀತಿ ಸೃಜನಾತ್ಮಕತೆ ಮೂಲಕ ಮಕ್ಕಳಲ್ಲಿ ಪ್ರೇರಣೆ ನೀಡಬೇಕು ಎಂದರು. ಆಡಳಿತ ಮಂಡಳಿ ಅಧ್ಯಕ್ಷರಾದ ಡಾ. ಕೆ.ಎಂ.ಕೃಷ್ಣ ಭಟ್ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಆಂಗ್ಲಮಾಧ್ಯಮ ಮುಖ್ಯೋಪಾಧ್ಯಾಯರು ಸತೀಶ್ ಕುಮಾರ್‌ರೈ, ಶ್ರೀ ರಾಮ ನಾಕ್, ಶ್ರೀಮತಿ ಮಮತಾ.ಆರ್ ಉಪಸ್ಥಿತರಿದ್ದರು. ರಾಮ ನಾಕ್ ಸ್ವಾಗತಿಸಿ, ರೇಶ್ಮಾ ಕಾರ್ಯಕ್ರಮ ನಿರ್ವಹಿಸಿದರು. ಪೂರ್ಣಿಮಾ.ಕೆ.ಎಸ್ ವಂದಿಸಿದರು.