QR Code Business Card

ಯಕ್ಷಗಾನ ತರಬೇತಿ ಉದ್ಘಾಟನೆ

ಯಕ್ಷಗಾನ ಕಲೆಯು ವ್ಯಕ್ತಿತ್ವ ವಿಕಸನವನ್ನು ಕಲಾತ್ಮಕವಾಗಿ ಬೆಳೆಸುವುದಲ್ಲದೆ ಬೌದ್ಧಿಕ ಹಾಗೂ ಮಾನಸಿಕ ಬೆಳೆವಣಿಗೆಗೆ ಸಹಾಯ ಮಾಡಬಲ್ಲದು ಎಂದು ಹಿರಿಯ ರಂಗಕರ್ಮಿ ಶ್ರೀಯುತ ಪೆರ್ವೊಡಿ ನಾರಾಯಣ ಭಟ್ ಅವರು ತಿಳಿಸಿದರು. ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಯಕ್ಷಗಾನ ತರಗತಿಯ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವ ಜನತೆ ಹೆಚ್ಚು ಆಕರ್ಷಿತರಾಗಿ ಈ ಕಲೆಯನ್ನು ಕರಗತಮಾಡಿಕೊಳ್ಳುವುದು ಸಮಾಜದ ಹಿತದೃಷ್ಣಿಯಿಂದ ಅತ್ಯಗತ್ಯ ಎಂದು ಹೇಳಿದರು.

yaksha1

yaksha2

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಕೆ.ಎಂ.ಕೃಷ್ಣ ಭಟ್, ಇವರು ವಹಿಸಿ, ಕರಾವಳಿಯಲ್ಲಿ ಯಕ್ಷಗಾನ ವ್ಯಾಪಕವಾಗಿ ಪಸರಿದ್ದು, ಇಂತಹ ತರಗತಿಗಳು ಕಲೆಯನ್ನು ಮಕ್ಕಳಲ್ಲಿ ಬೆಳೆಸಲು ಉತ್ತಮ ವೇದಿಕೆಯಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಯಕ್ಷಗಾನ ಗುರುಗಳಾದ ಶ್ರೀಯುತ ಉಂಡೆಮನೆ ಕೃಷ್ಣ ಭಟ್ಟರು ಮಕ್ಕಳ ಕಲಿಕಾ ರೀತಿ ನಿಯಮವನ್ನು ಹೇಳಿದರು. ಶಾಲಾ ಮುಖ್ಯೋಪಾಧ್ಯಾಯರು ಶ್ರೀ ಸತೀಶ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಲತಾಕುಮಾರಿ ಕಾರ್ಯಕ್ರಮ ನಿರ್ವಹಿಸಿ, ಶಿಕ್ಷಕ ರಾಜ್‌ಶೇಖರ್ ವಂದಿಸಿದರು.