QR Code Business Card

ಮುಖ್ಯೋಪಾಧ್ಯಾಯರ ಹಾಗೂ ಪೋಷಕರ ತುರ್ತುಸಭೆ

ದಿನಾಂಕ 2-7-2016 ರ ಶನಿವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಸುರಕ್ಷತೆಯ ಕುರಿತಾಗಿ ಪುತ್ತೂರು ನಗರದ ಎಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಯ, ಮುಖ್ಯೋಪಾಧ್ಯಾಯರ ಹಾಗೂ ಪೋಷಕರ ತುರ್ತುಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಮಕ್ಕಳ ಸುರಕ್ಷತೆಯ ಕುರಿತಾದ ಸಮಸ್ಯೆಯ ನಿವಾರಣೆಗಾಗಿ ಚರ್ಚೆ ನಡೆಯಿತು. ಈ ಕುರಿತು ಮುಂದಿನ ಕ್ರಮಕೈಗೊಳ್ಳುವುದಕ್ಕಾಗಿ ಶಾಸಕರನ್ನು ಭೇಟಿಯಾಗುವುದೆಂದು ತೀರ್ಮಾನಿಸಲಾಯಿತು.

P_20160702_133945

P_20160702_134018_EFF

ಸಭೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶಿವಪ್ರಸಾದ್.ಇ, ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಕೆ.ಎಂ.ಕೃಷ್ಣ ಭಟ್ ಮತ್ತು ಸಂಚಾಲಕರಾದ ರವೀಂದ್ರ ಪಿ., ಸುದಾನ ಪ್ರೌಢ ಶಾಲೆ ಸಂಚಾಲಕರಾದ ರೆ.ಫಾ.ವಿಜಯ ಹಾರ್ವಿನ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ವಿ.ಜಿ.ಭಟ್, ಪೋಷಕರ ಪ್ರತಿನಿಧಿಗಳಾದ ಶ್ರೀಗಿರೀಶ್ ಮಳಿ, ಮತ್ತು ಅನಿಲ್ ಗೌಡ ತೆಂಕಿಲ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಶ್ರೀಮಾತಿ ಆಶಾ ಬೆಳ್ಳಾರೆ ಮತ್ತು ನಳಿನಿ ಮಾತಾಜಿ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಸತೀಶ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.