ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಇಲ್ಲಿ ದಿನಾಂಕ 19-07-2016 ರಂದು ಗುರುಪೂರ್ಣಿಮೆಯನ್ನು ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಶ್ರೀಶ ಕುಮಾರ್ ಮಾತಾಡಿ, ಲೌಕಿಕ ವಿದ್ಯೆಯನ್ನು ನೀಡಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸಿ, ಆಶೀರ್ವಾದ ಪಡೆಯುವುದು ನಮ್ಮ ಕರ್ತವ್ಯವಾಗಿದೆ. ಹಾಗಾಗಿ ಎಲ್ಲಾ ಗುರುಗಳನ್ನು ಆರಾಧಿಸುವ ಪರ್ವ ದಿನವೇ ಗುರುಪೂರ್ಣಿಮೆ. ವೇದ ವ್ಯಾಸರು ಮಹಾಭಾರತ,18 ಪುರಾಣಗಳು, ಬ್ರಹ್ಮಸೂತ್ರ, ಭಾಗವತ ಪುರಾಣಗಳನ್ನು ರಚಿಸಿ ಗುರುತತ್ವವನ್ನು ಲೋಕಕ್ಕೆ ಸಾರಿದರು ಮತ್ತು ಲೋಕದ ಗುರುವಾದರು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದಿನೇಶ್ಚಂದ್ರ ಮಾತನಾಡಿ, ಗುರುಪೂರ್ಣಿಮೆಯು ವೇದವ್ಯಾಸ ಜಯಂತಿ. ಏಕಲವ್ಯ ಗುರುವಿಗೆ ದಕ್ಷಿಣೆಯಾಗಿ ಬೆರಳನ್ನು ನೀಡಿದ ದಿನ ಎಂದು ಹೇಳಿದರು.
ವೇದಿಕೆಯಲ್ಲಿ ಶಾಲಾ ಮುಖೋಪ್ಯಾಧ್ಯಾಯರು ಶ್ರೀ ಸತೀಶ್ ಕುಮಾರ್ ರೈ, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀ ರಾಮ ನಾಕ್, ಶ್ರೀಮತಿ ಮಮತಾ, ಶ್ರೀಮತಿ ಪುಷ್ಪಲತಾ, ಶ್ರೀಮತಿ ಮಧುರಾ ಜೋಶಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಮೂಹಿಕ ಭಜನೆ, ಗುರುವಂದನೆ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿ ನಾಯಕ ಸಾರ್ಥಕ್ ವಂದಿಸಿ, ವಿದ್ಯಾರ್ಥಿನಿ ಶ್ರುತಿಕಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.