ದಿನಾಂಕ 3-8-2016 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಪ್ರೋ.ವಿ.ಜಿ.ಭಟ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಮಾತಾಡಿ ಶಾಲೆಯ ಕುರಿತಾಗಿ ಪೋಷಕರು ಅಭಿಮಾನ, ಗೌರವ ಮೂಡಿಸಿಕೊಂಡಾಗ ಮಕ್ಕಳಲ್ಲೂ ಶಾಲೆಯ ಬಗ್ಗೆ ಅಭಿಮಾನ ಮೂಡುತ್ತದೆ. ಒಮ್ಮೆ ಕೈ ತಪ್ಪಿದ ಮಗು ಪುನಃ ಕೈಸೇರುವುದು ಕಷ್ಟ ಸಾಧ್ಯ. ಮಕ್ಕಳ ಮಾನಸಿಕ ಸ್ಥೈರ್ಯ ತಿಳಿದುಕೊಂಡು, ಅದರಂತೆ ನಡೆದುಕೊಳ್ಳುವುದು ಪೋಷಕರಾದ ನಮ್ಮ ಆದ್ಯ ಕರ್ತವ್ಯ ಎಂದರು.
ಶಾಲಾ ಮುಖ್ಯೋಪಾಧ್ಯಾಯರು ಸತೀಶ್ ಕುಮಾರ್ ರೈ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಪ್ರಾಥಮಿಕ ವಿಭಾಗ ಮುಖ್ಯಗುರು ರಾಮ ನಾಕ್ ಹಾಗೂ ತರಗತಿ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕ ವೆಂಕಟೇಶ್ ಪ್ರಸಾದ್ ಸ್ವಾಗತಿಸಿ, ಶಿಕ್ಷಕಿ ಸಂಧ್ಯಾ ವಂದಿಸಿ, ಶಿಕ್ಷಕಿ ವೀಣಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.