QR Code Business Card

ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ಶಾಲಾ ವಿದ್ಯಾರ್ಥಿಗಳು

ವಿದ್ಯಾಭಾರತಿ ಕರ್ನಾಟಕ ಆಯೋಜಿಸಿರುವ ಜಿಲ್ಲಾ ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.

DSC03910

ಶಿಶುವರ್ಗ: ಪ್ರಣಾಮ್ ಎಂ. ವೈ, (ವಿಜ್ಞಾನ ಮಾದರಿ), ಆತ್ಮೀಯ ಎಮ್ ಕಶ್ಯಪ್, ಪಂಕಜ್ ಭಟ್, ಧನುಷ್‌ರಾಂ (ವಿಜ್ಞಾನ ರಸಪ್ರಶ್ನೆ), ವಿಂಧ್ಯಾ ಕಾರಂತ್ (ವಿಜ್ಞಾನ ಪ್ರಯೋಗ), ಶುಭನ್, ಶಮಂತ್, ಕರಣ್ ಭಟ್ (ವೇದಿಕ್ ಗಣಿತ) ಇವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

ತನ್ವಿ ಶೆಣೈ (ವಿಜ್ಞಾನ ಮಾದರಿ) ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಪ್ರಜ್ಞಾ ವಿ.ಬಿ (ವಿಜ್ಞಾನ ಮಾದರಿ) ಅಭಿಜ್ಞಾ ಆರ್ (ವಿಜ್ಞಾನ ಮಾದರಿ), ಪ್ರಣವ್ (ಗಣಿತ ಪ್ರಯೋಗ) ತೃತೀಯ ಸ್ಥಾನ ಪಡೆದಿದ್ದಾರೆ.

ಬಾಲವರ್ಗ: ಯಶಸ್ವಿ ಶೆಟ್ಟಿ ವಿಜ್ಞಾನ ಪತ್ರ ವಾಚನ (ಪ್ರಥಮ ಸ್ಥಾನ), ಶಶಾಂಕ್ ಬಿ (ವಿಜ್ಞಾನ ಮಾದರಿ), ತೇಜಸ್ವಿ ಪಿ. ಭಟ್ (ವಿಜ್ಞಾನ ಮಾದರಿ) ದ್ವಿತೀಯ ಸ್ಥಾನವನ್ನು, ಶುಭಶ್ರೀ (ವಿಜ್ಞಾನ ಮಾದರಿ), ಆಶ್ರಯ (ಗಣಿತ ಪ್ರಯೋಗ) ತೃತೀಯ, ಅವನೀಶ್, ದೀಪ್ತಿಲಕ್ಷ್ಮಿ, ಕ್ಷಿತಿ ಕಶ್ಯಪ್ (ಸಂಸ್ಕೃತಿ ಜ್ಞಾನ) ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಕಿಶೋರ ವರ್ಗ: ಸ್ವಸ್ತಿಕ್ ಪದ್ಮ (ವಿಜ್ಞಾನ ಮಾದರಿ), ಅನಘ (ಗಣಿತ ಮಾದರಿ) ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

ಅಕ್ಷಯ ಪಾಂಗಾಳ್ ಗಣಿತ ಪ್ರಯೋಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ವಿಜಿತ್ ಕೃಷ್ಣ, ಗೌರೀಶ, ಸುಹಾಸ್ ಭಟ್ ವೇದ ಗಣಿತ ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ನಿಖಿಲ್ ಕೆ, ಜನಕಾ ರಾವ್, ಭಾವನಾ, ಆತ್ಮೀ ರೈ ವಿಜ್ಞಾನ ಮಾದರಿಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಸ್ವಸ್ಥಿಕ್ ಕಾರಂತ (ವಿಜ್ಞಾನ ಪ್ರಯೋಗ) ತೃತೀಯ, ವರುಣ್ ಕೆ, ಅಪೇಕ್ಷಾ ಭಟ್, ತೇಜ ವಿಜ್ಞಾನ ರಸಪ್ರಶ್ನೆಯಲ್ಲಿ ತೃತೀಯ, ರಾಕೇಶ್ ಪಿ.ಎಸ್, ಪೃಥ್ವಿರಾಮ್ sಸುಧನ್ವ ಶ್ಯಾಮ್ ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.

ಇಲ್ಲಿ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.