ದಿನಾಂಕ 15-09-2016 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು ಇಲ್ಲಿ ಇಂಟರ್ಯಾಕ್ಟ್ ಕ್ಲಬ್ನ ಉದ್ಘಾಟನೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ರೋಟರಿ ಪೂರ್ವದ ಅಧ್ಯಕ್ಷ ರೋ| ಮುರಳಿಶ್ಯಾಂ ಮಾತನಾಡಿ ಮಕ್ಕಳಲ್ಲಿರುವ ಸುತ್ತ ಪ್ರತಿಭೆಯನ್ನು ಹೊರತರಲು ಮತ್ತು ವ್ಯಕ್ತಿತ್ವದ ನಿರ್ಮಾಣಕ್ಕೆ ಇಂಟರ್ಯಾಕ್ಟ್ ಕ್ಲಬ್ ಅವಶ್ಯಕವೆಂದು ನುಡಿದರು. ಮುಖ್ಯ ಅತಿಥಿಯಾಗಿ ಶಾಲೆಯ ಶಿಕ್ಷಕರಾದ ರಾಧಾಕೃಷ್ಣ ರೈ ಅವರು ಇಂತಹ ಕ್ಲಬ್ನ ಮುಖಾಂತರ ಮಕ್ಕಳು ಸಮಾಜಮುಖಿಗಳಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಲು ಸೂಕ್ತವಾದುದು ಎಂದು ನುಡಿದರು. ಶಾಲೆಯ ಇಂಟರ್ಯಾಕ್ಟ್ ಕ್ಲಬ್ನ ಅಧ್ಯಕ್ಷನಾಗಿ ಸುಧನ್ವಶ್ಯಾಮ, ಕಾರ್ಯದರ್ಶಿಯಾಗಿ ವಿಸ್ಮಯ, ಸಂದೇಶ ದಂಢಾಧಿಕಾರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಪುತ್ತೂರು ರೋಟರಿ ಕ್ಲಬ್ನ ವಿಭಾಗದ ಮುಖ್ಯಸ್ಥ ಶ್ಯಾಮಪ್ರಸಾದ್, ಕಾರ್ಯದರ್ಶಿಗಳಾದ ಶರತ್ ಕುಮಾರ್ ರೈ, ಶಾಲೆಯ ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ, ಶಾಲಾ ಇಂಟರ್ಯಾಕ್ಟ್ ಕ್ಲಬ್ನ ಸಂಯೋಜಕ ಗಣೇಶ್ ಕುಲಾಲ್ ಏತಡ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸುಹಾಸ್ ಮತ್ತು ರಾಹುಲ್ ಪ್ರಾರ್ಥಿಸಿ, ರಾಹುಲ್ ನಾಯಕ್ ಸ್ವಾಗತಿಸಿ, ವಿದ್ಯಾರ್ಥಿ ಸಂದೇಶ್ ಕಾರ್ಯಕ್ರಮ ನಿರೂಪಿಸಿದರು.