ದಿನಾಂಕ 3-10-2016 ರಂದು ವಿದ್ಯಾಭಾರತಿ ಕರ್ನಾಟಕ ಹಾಗೂ ಶಾರದಾ ವಿದ್ಯಾಲಯ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಹಾಗೂ ವಿಭಾಗ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಅಯ್ಕೆಯಾಗಿರುತ್ತಾರೆ.
10 ನೇ ತರಗತಿಯ ರತನ್ ಬಿ- 100 ಮೀ, 200 ಮೀ, 4×100 ಮೀ ಫ್ರೀ ಸ್ಟೈಲ್ ವಿಭಾಗದಲ್ಲಿ ಪ್ರಥಮ, 7 ನೇ ತರಗತಿಯ ನೂತನ್.ಬಿ 100 ಮೀ, 200 ಫ್ರೀ ಸ್ಟೈಲ್ ವಿಭಾಗದಲ್ಲಿ ಪ್ರಥಮ, 9 ನೇ ತರಗತಿಯ ಅಮೃತ್ ಸಿ. 100 ಮೀ, 200 ಮೀ, 800 ಮೀ ಫ್ರೀ ಸ್ಟೈಲ್ ವಿಭಾಗದಲ್ಲಿ ಪ್ರಥಮ, 8 ನೇ ತರಗತಿಯ ಶ್ರೇಯಾ ಪಿ.ಯು, 50 ಮೀ, 200 ಮೀ ಬಟರ್ ಫ್ಲೈ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು, ನವೆಂಬರ್ 3 ಮತ್ತು 4 ರಂದು ಮಧ್ಯಪ್ರದೇಶದ ಮುಂಡ್ಸೂರ್ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.