QR Code Business Card

ರಾಷ್ಟ್ರಮಟ್ಟದ ವಿಜ್ಞಾನ ಸ್ಪರ್ಧೆಗೆ ಆಯ್ಕೆ

ದಿನಾಂಕ 20-10-2016 ರಿಂದ 22-10-2016 ರವರೆಗೆ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಮಧ್ಯ ಕ್ಷೇತ್ರ (ಕರ್ನಾಟಕ, ಆಂದ್ರಪ್ರದೇಶ ಮತ್ತು ತೆಲಂಗಾಣಗಳನ್ನೊಳಗೊಂಡ) ಮಟ್ಟದ ಮೂರು ದಿನಗಳ ಜ್ಞಾನ-ವಿಜ್ಞಾನ ಮೇಳದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಸ್ವಸ್ತಿಕ್ ಪದ್ಮ ಮತ್ತು ಧ್ಯಾನ್(10ನೇ ತರಗತಿ) ಇವರು ವೇಸ್ಟ್ ಮೆನೇಜ್‌ಮೆಂಟ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು, ಯಶಸ್ವಿ ಶೆಟ್ಟಿ, 6ನೇ ತರಗತಿ ಇವರು ವಿಜ್ಞಾನ ಪತ್ರವಾಚನದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ. ಇವರು ಮುಂದಿನ ತಿಂಗಳು 18 ರಿಂದ 22 ರವರೆಗೆ ಜಾರ್ಖಂಡ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಅಖಿಲ ಭಾರತೀಯ ಜ್ಞಾನ-ವಿಜ್ಞಾನ ಮೇಳದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆಂದು ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.

img-20161024-wa0024