QR Code Business Card

ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ – ಕ್ಷೇತ್ರಿಯ ಮಟ್ಟಕ್ಕೆ ಅಯ್ಕೆ

ವಿದ್ಯಾಭಾರತಿ ಕರ್ನಾಟಕ ಹಾಗೂ ರಾಷ್ಟ್ರೋತ್ಥಾನ ವಿದ್ಯಾಮಂದಿರ್ ಧಾರವಾಡ ಇಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಕ್ಷೇತ್ರಿಯ ಮಟ್ಟಕ್ಕೆ ಅಯ್ಕೆಯಾಗಿದ್ದಾರೆ.

ಬಾಲ ವರ್ಗ ವಿಭಾಗದ ಬಾಲಕರಲ್ಲಿ ಫಿರ್‍ಕಟ್ ಎಸ್ ಪಾಸ್ಹ 100 ಮೀ, 400 ಮೀ, 80 ಮೀ ಹರ್ಡಲ್ಸ್ , 4×100 ಮೀ ರಿಲೇ ಯಲ್ಲಿ ಪ್ರಥಮ, ವಡ್ರಬಾಕ್ ಚಕ್ರ ಎಸೆತ ತೃತೀಯ, ಅಂಕಿತ್ ರೈ 4×100 ಮೀ ಪ್ರಥಮ, ಶೂಶಾನ್ ಬಪ್ಪಳಿಗೆ 4×100 ಮೀ ಪ್ರಥಮ, ಕೆರ್ಮಿ 4×100 ಮೀ ಪ್ರಥಮ, ಹೈಪರ್ ಮೀ 80 ಮೀ ಹರ್ಡಲ್ ದ್ವಿತೀಯ ಸ್ಥಾನ.

p_20161026_112649

ಬಾಲ ವರ್ಗ ವಿಭಾಗದ ಬಾಲಕಿಯರಲ್ಲಿ ಪ್ರಣಮ್ಯ ಶೆಟ್ಟಿ ಗುಂಡು ಎಸೆತ ಪ್ರಥಮ, ಚಕ್ರ ಎಸೆತ ದ್ವಿತೀಯ, ಧನ್ಯ ಶ್ರೀ ಎತ್ತರ ಜಿಗಿತ ತೃತೀಯ ಸ್ಥಾನ.

ಕಿಶೋರ ವರ್ಗ ವಿಭಾಗದ ಬಾಲಕರಲ್ಲಿ ರಕ್ಷಿತ್ ಡಿ.ಜಿ 400 ಮಿ ದ್ವಿತೀಯ, ಜೆಸ್ಟಿನ್ ಪಾವ್ಹಾ ಕೋಲು ನೆಗೆತ ಪ್ರಥಮ, ಜಾವೆಲಿನ್ ದ್ವಿತೀಯ, ಚೈತ್ರೇಶ್ 5 ಕಿ ಮೀ ನಡಿಗೆ ದ್ವಿತೀಯ, ಓಕ್ರಮ್ ಅಂಗದ್ ಸಿಂಗ್ ಗುಂಡು ಎಸೆತ ದ್ವಿತೀಯ, ವಿನೀತ್ ಜಿ.ಆರ್ ಹ್ಯಾಮರ್ ಎಸೆತ ದ್ವಿತೀಯ, ಚಕ್ರ ಎಸೆತ ಪ್ರಥಮ, ಕಿಶಾನ್ ಎ ಹ್ಯಾಮರ್ ಎಸೆತ ಪ್ರಥಮ, ಎನ್ ಜಿ ವೇದಾಂತ್ 100 ಮಿ ಹರ್ಡಲ್ಸ್ ಪ್ರಥಮ, ಎತ್ತರ ಜಿಗಿತ ಪ್ರಥಮ, ಎನೈಹ್ಮಿಕಿ 100 ಮಿ ಹರ್ಡಲ್ಸ್ ದ್ವಿತೀಯ ಸ್ಥಾನ.

ಕಿಶೋರ ವರ್ಗ ವಿಭಾಗದ ಬಾಲಕಿಯರಲ್ಲಿ ಸ್ನೇಹಾ ಎಸ್ ಶೆಟ್ಟಿ ಉದ್ದ ಜಿಗಿತ ದ್ವಿತೀಯ, ನಿಕ್ಷೀತಾ ಶೆಟ್ಟಿ ಚಕ್ರ ಎಸೆತ ಪ್ರಥಮ, ಶ್ರುತಾ ಪಿ ಶೆಟ್ಟಿ ಜಾವೆಲಿನ್ ದ್ವಿತೀಯ, ಹೀಮಾನಿ 400 ಮೀ ದ್ವಿತೀಯ, 200 ಮೀ ತೃತೀಯ ಸ್ಥಾನ ಪಡೆದಿರುತ್ತಾರೆ.

ಬಾಲ ವರ್ಗ ವಿಭಾಗದ ಬಾಲಕರಲ್ಲಿ ಫಿರ್‍ಕಟ್ ಎಸ್ ಪಾಸ್ಹ ವೈಯಕ್ತಿಕ ಚಾಂಪಿಯನ್ ಪಡೆದಿರುತ್ತಾನೆ. ಇದರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.