ಶ್ರೀ ಧರ್ಮಸ್ಥಳ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್(ರಿ.), ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಜಂಟಿ ಆಶ್ರಯದಲ್ಲಿ ‘ಜ್ಞಾನ ಗಂಗಾ’ , ‘ಜ್ಞಾನ ಸುಧಾ’ ನೈತಿಕ ಮೌಲ್ಯಧಾರಿತ ಮಕ್ಕಳನ್ನಾಧರಿಸಿದ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ಸಭಾಂಗಣದಲ್ಲಿ 3-11-2016 ರಂದು ನಡೆಯಿತು.
ವೆಂಕಟೇಶ್ ಭಟ್ ಅಮೈ ಅಧ್ಯಕ್ಷರು ವಿವೇಕನಾಂದ ಆಂಗ್ಲ ಮಾಧ್ಯಮ ಶಾಲೆ, ಪುತ್ತೂರು, ಇವರು ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ ನೂರಾರು ಭಾಷಣಗಳನ್ನು ಕೇಳುವುದರಿಂದ ಒಂದು ಪುಸ್ತಕವನ್ನು ಓದುವುದು ಮುಖ್ಯ. ನೈತಿಕ ಶಿಕ್ಷಣದ ಅಧಃಪತನವನ್ನು ತಡೆಯಲು ಜ್ಞಾನಗಂಗಾ, ಜ್ಞಾನ ಸುಧಾಗಳಂತಹ ಮೌಲ್ಯಯುತ ಸ್ಪರ್ಧೆಗಳು ಪೂರಕವಾಗಲಿ ಎಂದು ಆಶಿಸಿದರು.
ಚಿದಾನಂದ ಕಾಮತ್ ಕಾಸರಗೋಡು ಕಾರ್ಯಕ್ರಮ ಉದ್ಘಾಟಿಸಿ ಬಾಲ್ಯದಲ್ಲಿಯೇ ಮಕ್ಕಳಿಗೆ ನೈತಿಕ ಮೌಲ್ಯ ಸಿಗುವಂತೆ ಮಾಡುವುದು ಈ ಕಾರ್ಯಕ್ರಮದ ಸಂಕಲ್ಪ. ಬದುಕಿನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಶ್ರೇಷ್ಠವಾದುದು ಮತ್ತು ಜೀವನದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಚಾಕ ಚಕ್ಯತೆ ಬೆಳೆಸುವುದು ಮುಖ್ಯ ಎಂದರು. ಡಾ.ಶಶಿಕಾಂತ ಜೈನ್, ಯೋಗ ತರಬೇತುದಾರರು ಶಾಂತಿವನ ಟ್ರಸ್ಟ್, ಧರ್ಮಸ್ಥಳ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಪ್ರತಿಭಾರಂಗದ ನಾರಾಯಣ ರೈ ಕುಕ್ಕುವಳ್ಳಿ, ಪ್ರಗತಿ ಟ್ಯುಟೋರಿಯಲ್ಸ್ ಪುತ್ತೂರು ಇದರ ಪ್ರಾಂಶುಪಾಲೆ ಹೇಮಲತಾ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಸತೀಶ್ ಕುಮಾರ್ ರೈ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಚಂದ್ರಶೇಖರ್ ಉಪಸ್ಥಿತರಿದ್ದರು.
ಶಿಕ್ಷಕ ರಾಮಣ್ಣ ಸ್ವಾಗತಿಸಿ, ಜಯರಾಂ ವಂದಿಸಿ, ಶಿಕ್ಷಕಿ ಸೌಮ್ಯಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.