ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಹಾಗೂ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ರಾಮಕುಂಜ ಇಲ್ಲಿ ನವೆಂಬರ್ 4 ಮತ್ತು 5 ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಪ್ರಾಥಮಿಕ ವಿಭಾಗದ ಬಾಲಕರು ದ್ವಿತೀಯ ತಂಡಪ್ರಶಸ್ತಿ, ಹಾಗೂ ಪ್ರೌಢ ಶಾಲಾ ವಿಭಾಗದ ಬಾಲಕರು ಪ್ರಥಮ ತಂಡ ಪ್ರಶಸ್ತಿಯನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ವಿಭಾಗದ ಬಾಲಕರಲ್ಲಿ ವಡ್ರಬಾಕ್ ಗುಂಡು ಎಸೆತ ಪ್ರಥಮ, ಚಕ್ರ ಎಸೆತ ಪ್ರಥಮ, ಕೋಮಿಂಗ್ಸ್ಟೂನ್ 200 ಮೀ ಪ್ರಥಮ, ಉದ್ದಜಿಗಿತ ದ್ವಿತೀಯ, ಸ್ವಾಕಿಪಾವಾ-ಎತ್ತರಜಿಗಿತ-ಪ್ರಥಮ, ಬಾಲಕಿಯರ ವಿಭಾಗದಲ್ಲಿ ಚರಿತ ಎತ್ತರಜಿಗಿತ-ದ್ವಿತೀಯ, 80 ಮೀ ಹರ್ಡಲ್ಸ್ -ದ್ವಿತೀಯ ಪಡೆದಿದ್ದಾರೆ. ಪ್ರಾಥಮಿಕ ವಿಭಾಗದ ೮ನೇ ತರಗತಿಯ ಬಾಲಕರ ವಿಭಾಗದಲ್ಲಿ ಫಿರ್ಕಟ್-80 ಮೀ ಹರ್ಡಲ್ಸ್ -ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಚರಿತ ಎತ್ತರಜಿಗಿತ-ದ್ವಿತೀಯ, ೮೦ಮೀ ಹರ್ಡಲ್ಸ್ -ದ್ವಿತೀಯ ಪಡೆದಿದ್ದಾರೆ.
ಪ್ರೌಢ ಶಾಲಾ ವಿಭಾಗದ ಬಾಲಕರ ವಿಭಾಗದಲ್ಲಿ ವಿನೀತ್ ಜಿ.ಆರ್-ಚಕ್ರ ಎಸೆತ ಪ್ರಥಮ, ಹ್ಯಾಮರ್ ಎಸೆತ ದ್ವಿತೀಯ, ಗುಂಡು ಎಸೆತ ದ್ವಿತೀಯ, ಕಿಶಾನ್.ಎ- ಹ್ಯಾಮರ್ ಎಸೆತ ಪ್ರಥಮ, ಓಕ್ರಮ್ ಅಂಗದ್ ಸಿಂಗ್ ಗುಂಡು ಎಸೆತ ಪ್ರಥಮ, ಥ್ಯಾಫರ್ಕಟ್ -ಜಾವೆಲಿನ್ -ದ್ವಿತೀಯ, 4×100 ಮಿ ರಿಲೇ ದ್ವಿತೀಯ, ರಕ್ಷಿತ್ ಡಿ.ಜಿ-400 ಮಿ – ದ್ವಿತೀಯ, 4×100 ಮಿ ರಿಲೇ ದ್ವಿತೀಯ, ಚೈತ್ರೇಶ್ -5ಕಿ.ಮೀ ನಡಿಗೆ ತೃತೀಯ, ವೇದಾಂತ್ ಸಿಂಗ್-100ಮೀ ಹರ್ಡಲ್ಸ್ -ದ್ವಿತೀಯ, ಎತ್ತರ ಜಿಗಿತ ತೃತೀಯ , ಜೆಸ್ಟಿನ್ ಪಾವ್ಹಾ-4×100 ಮಿ ರಿಲೇ ದ್ವಿತೀಯ, ಕೋಲು ನೆಗೆತ ತೃತೀಯ, ಸ್ಯಾಮುಲಂಕಿ-4×100 ಮಿ ರಿಲೇ ದ್ವಿತೀಯ ಪಡೆದಿದ್ದಾರೆ. ಬಾಲಕಿಯರ ವಿಭಾಗದಲ್ಲಿ ನಿಕ್ಷಿತಾ ಶೆಟ್ಟಿ-ಚಕ್ರ ಎಸೆತ ಪ್ರಥಮ, ಶ್ರುತಾ ಪಿ ಶೆಟ್ಟಿ-100 ಮೀ ಹರ್ಡಲ್ಸ್-ತೃತೀಯ ಸ್ಥಾನ ಪಡೆದಿರುತ್ತಾರೆ.
ಇದರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ನವೆಂಬರ್ 14 , 15 ರಂದು ಪಂಜದ ಕೋಟಿ-ಚೆನ್ನಯ ಕ್ರೀಡಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.