ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ತೆಂಕಿಲ ಇದರ 2016-17 ನೇ ಸಾಲಿನ 9, 10 ನೇ ತರಗತಿಯ ’ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮ ಸ್ವಾಮಿ ಕಲಾಮಂದಿರದ ಸಭಾಂಗಣದಲ್ಲಿ 9 ದಶಂಬರ 2016 ರಂದು ನಡೆಯಿತು.
ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಮುರಳಿಕೃಷ್ಣ ರೈ ಮುಖ್ಯ ಅತಿಥಿಯಾಗಿ ಮಾತನಾಡಿ, ಸಾಧನಾಶೀಲತೆಯನ್ನು ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ನಮ್ಮ ಗುರಿ ಹಿಮಾಲಯದ ತುತ್ತ ತುದಿಯಾಗಿರಬೇಕು. ಎಲ್ಲಾ ಕ್ಷೇತ್ರದಲ್ಲಿಯೂ ಜಯಶೀಲರಾಗಿ ಉತ್ತುಂಗದ ಶಿಖರವನ್ನು ಏರಿ ಎಂದು ಹಾರೈಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಡಾ.ರವಿಶಂಕರ್ ಪೆರುವಾಜೆ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಪ್ರತಿಭೆಗಳು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ. ಎಲ್ಲಿ ಪ್ರತಿಭೆಗಳು ಇವೆಯೋ ಅಲ್ಲಿ ಸೋಲು ಇರಲಾರದು. ನಿಮ್ಮ ಶಕ್ತಿಯನ್ನು ಇಡೀ ವಿಶ್ವಕ್ಕೆ ಪಸರಿಸಲು ಈ ವೇದಿಕೆ ಸಾಕ್ಷಿಯಾಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ, ಪ್ರಾಥಮಿಕ ವಿಭಾಗದ ಮುಖ್ಯಗುರು ರಾಮನಾಕ್, ಶಿಕ್ಷಕ ರಕ್ಷಕ ಸಂಘದ ಸದಸ್ಯರುಗಳಾದ ದಿನೇಶ್.ಪಿ.ವಿ, ಸಂಧ್ಯಾ ಶೆಟ್ಟಿ, ಸಂಧ್ಯಾ ಕಾರಂತ, ಉಷಾಕಿರಣ, ಉಮಾ.ಕೆ, ಉದಯ ಕುಮಾರ್.ಡಿ, ಡಿ.ಶಂಭು ಭಟ್, ಸಿಂಧು ನಾಯಕ್, ಮತ್ತು ಪೂರ್ಣಿಮಾ ಉಪಸ್ಥಿತರಿದ್ದು ಬಹುಮಾನಗಳನ್ನು ವಿತರಿಸಿದರು. ವಿದ್ಯಾರ್ಥಿ ನಾಯಕ ಸಾರ್ಥಕ್.ಬಿ.ಎಸ್ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಮನಿಷಾ ಮತ್ತು ಸುರಭಿ ಕಾರ್ಯಕ್ರಮ ನಿರ್ವಹಸಿದರು.