ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇದರ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳ 2016-17 ನೇ ಸಾಲಿನ ಪ್ರತಿಭಾ ಪುರಸ್ಕಾರ ಡಿಸೆಂಬರ್ 11 ರ ರವಿವಾರ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಆಡಳಿತ ಮಂಡಳಿಯ ಸದಸ್ಯೆ ಸುನೀತಾ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಬಾಲ್ಯ ಮನುಷ್ಯನ ಜೀವನದಲ್ಲಿ ಮಹತ್ವದ ಹಂತ. ಈ ಹಂತದಲ್ಲಿ ವಿದ್ಯೆಯ ಕಲಿಕೆ ಆರಂಭವಾಗುತ್ತದೆ. ಈ ಸಮಯದಲ್ಲಿ ಸಿಗುವ ಪ್ರೋತ್ಸಾಹ ಸಮಾಜದಲ್ಲಿ ಮುಂದೆ ಒಬ್ಬ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಆಡಳಿತ ಮಂಡಳಿಯ ಸದಸ್ಯೆ ರೂಪಲೇಖಾ ಹರಿಕೃಷ್ಣ ಪಾಣಾಜೆ ಮಾತನಾಡಿ ಮಕ್ಕಳಿಂದ ಹಿಡಿದು ವೃದ್ಧಾಪ್ಯದವರೆಗೆ ಎಲ್ಲರಿಗೂ ಗುರುತಿಸಿಕೊಳ್ಳುವುದನ್ನು ಬಯಸುತ್ತಾರೆ. ಹಾಗಾಗಿ ಪುಟ್ಟ ಮಕ್ಕಳ ಹಂತದಲ್ಲೇ ಮಕ್ಕಳಿಗೆ ಸಿಗಬೇಕಾದ ಪ್ರೋತ್ಸಾಹವನ್ನು ನಾವು ನೀಡಬೇಕು. ಹಾಗಾದಾಗ ಮಕ್ಕಳು ಋಣಾತ್ಮಕತೆಯನ್ನು ಬಿಟ್ಟು ಧನಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಳ್ಳುತ್ತಾರೆ ಎಂದರು.
ಪ್ರಾಥಮಿಕ ವಿಭಾಗದ ಮುಖ್ಯಗುರು ರಾಮನಾಕ್, ಕೆ.ಜಿ. ವಿಭಾಗದ ಮುಖ್ಯಸ್ಥೆ ಮಮತಾ. ಕೆ, ವಿವೇಕಾನಂದ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಲಕ್ಷ್ಮಣ ಗೌಡ ಮತ್ತು ತುಳಸಿ ಕುಮಾರಿ ಸಂರ್ಭೋಚಿತವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಸದಸ್ಯ ಸುರೇಶ್ ಪುತ್ತೂರಾಯ, ವೇದಿಕೆಯಲ್ಲಿದ್ದ ಶಿಕ್ಷಕ ರಕ್ಷಕ ಸಂಘದ ಸದಸ್ಯರುಗಳಾದ ಶಿವರಂಜನ್, ವೀಣಾ ಆಚಾರ್ಯ, ನಮಿತಾ ಪಿ. ಶೆಟ್ಟಿ, ಸಾಯಿಗೀತಾ ಪಿ. ನಾಕ್, ರಾಜೇಂದ್ರ ಪ್ರಸಾದ್, ಡಾ.ಪ್ರತಿಭಾ ಕಲ್ಲೂರಾಯ, ಹರೀಶ್ ಕೆ.ವಿ ಮತ್ತು ಸುಮ ಪುಟಾಣಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು.
ಮುಖ್ಯ ಗುರುಗಳಾದ ಸತೀಶ್ ಕುಮಾರ್ ರೈ ಸ್ವಾಗತಿಸಿ, ಶಿಕ್ಷಕಿ ಪ್ರತಿಮಾ ಕಾರ್ಯಕ್ರಮ ನಿರ್ವಹಿಸಿದರು.