ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ಡಿಸೆಂಬರ್ 20 ರಿಂದ 23 ರ ವರೆಗೆ ನಡೆದ ಐರಿಸ್ ರಾಷ್ಟ್ರಮಟ್ಟದ ವಿಜ್ಞಾನ ಮೇಳದಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಸ್ವಸ್ತಿಕ್ ಪದ್ಮ ಭಾಗವಹಿಸಿದ್ದು, ಎರಡು ವಿಶೇಷ ಪ್ರಶಸ್ತಿಯೊಂದಿಗೆ ISEF ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಒಟ್ಟು 100 ತಂಡಗಳು ಇನೋವೇಟಿವ್ ವಿಭಾಗದಲ್ಲಿ ಸ್ಪರ್ಧಿಸಿದ್ದು Material Science ವಿಭಾಗದಲ್ಲಿ ASM Material Education Foundation ಕೊಡಮಾಡುವ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದು, World’s Largest And Most Established Materials Information Society ಇವರಿಂದ ಗುರುತಿಸಿ ಸನ್ಮಾಸಿಸಲ್ಪಟ್ಟ ಏಕೈಕ ವಿದ್ಯಾರ್ಥಿ ಎಂಬುದು ಹೆಮ್ಮೆಯ ಸಂಗತಿಯಾಗಿರುತ್ತದೆ.
ಇದರ ಜೊತೆಗೆ ಪ್ರಶಸ್ತಿಯನ್ನು ಪಡೆದು, ಅಮೇರಿಕಾದ ಲಾಸ್ಎಂಜಲೀಸ್ನಲ್ಲಿ 2017 ರ ಮೇ ತಿಂಗಳಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾನೆ. ಇವನು ಪ್ಲಾಮ- ಅನಾಲಿಸಿಸ್ ಎಂಡ್ ಡೆವಲಪ್ ಮೆಂಟ್ ಆಫ್ ಇಕೊ ಫ್ರೆಂಡ್ಲೀ ಮೆಟೀರಿಯಲ್ ಫ್ರಂ ವೇಸ್ಟ್ ಎಲ್.ಡಿ.ಪಿ.ಇ ಪ್ಲಾಸ್ಟಿಕ್ ಎಂಡ್ ಸ್ಯಾಂಡ್ ಎಂಬ ಪ್ರಾಜೆಕ್ಟ್ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರು ಉಪಯೋಗಿಸುವಲ್ಲಿ ಹೊಸ ಪ್ರಯೋಗವನ್ನು ಮಾಡಿ ಸಾಮಾಜಿಕ ಕಳಕಳಿಯನ್ನು ಬಿಂಬಿಸಿದ್ದಾನೆ. ಎಂದು ಮುಖ್ಯೋಪಾಧ್ಯಾಯರು ಶಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈತ ಮುರ್ಗಜೆ ಶ್ರೀರಾಮ ಭಟ್ ಮತ್ತು ಮಲ್ಲಿಕಾ ಶ್ರೀರಾಮ ಇವರ ಪುತ್ರ.