QR Code Business Card

ಆಂಗ್ಲ ಭಾಷಾ ಕಾರ್ಯಾಗಾರ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಇಲ್ಲಿನ ಶಿಕ್ಷಕರಿಗಾಗಿ ಆಂಗ್ಲ ಭಾಷಾ ಸಂವಹನ ಕಲೆ ಎಂಬ ವಿಷಯದ ಬಗ್ಗೆ ಕಾರ್ಯಾಗಾರ ದಿನಾಂಕ 21-1-2017 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಮಂಗಳಾ ಉಪಾಧ್ಯಾಯ, ನಿವೃತ್ತ ಮುಖ್ಯ ಶಿಕ್ಷಕರು ಮುಂಬಯಿ ಇವರು ಆಂಗ್ಲ ಭಾಷೆಯಲ್ಲಿ ಸಂಹವನ ಮಾಡುವ ಕಲೆ ಮತ್ತು ಆಂಗ್ಲ ಭಾಷಾ ಬೋಧನೆ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು.

vems-workshop1

vems-workshop

ಸಭಾಧ್ಯಕ್ಷತೆ ವಹಿಸಿದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ವೆಂಕಟೇಶ್ವರ ಅಮೈ, ಇವರು ಮಾತನಾಡಿ ಸಮಯದ ಮಹತ್ವದ ಬಗ್ಗೆ ತಿಳಿದುಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವಿದ್ಯಾರ್ಥಿಗಳು ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ ಎಂದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಮುರಳೀಧರ.ಕೆ, ಆಡಳಿತ ಮಂಡಳಿ ಸದಸ್ಯರು -ಡಾ.ಸುರೇಶ್ ಪುತ್ತೂರಾಯ, ಚಂದ್ರಶೇಖರ, ಸುನೀತಾ ಶೆಟ್ಟಿ, ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ವಾಮನ ಪೈ ಮತ್ತು ಕೆ.ಜಿ.ವಿಭಾಗದ ಮುಖ್ಯಸ್ಥೆ ಮಮತಾ.ಆರ್ ಉಪಸ್ಥಿತರಿದ್ದರು. ಶಿಕ್ಷಕಿ ಕವಿತಾ.ಕೆ ಪ್ರಾರ್ಥಿಸಿ, ಪ್ರಿಯಾಕುಮಾರಿ ಸ್ವಾಗತಿಸಿ, ನವಿತಾ.ಪಿ.ಕೆ ವಂದಿಸಿ, ದೀಪ್ತಿ ಕಾರ್ಯಕ್ರಮ ನಿರೂಪಿಸಿದರು.