ದಿನಾಂಕ 28-1-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿ ರಾಷ್ಟ್ರೀಯ ರೂಬೆಲ್ಲಾ ಮತ್ತು ದಡರಾ ಲಸಿಕಾ ಕಾರ್ಯಕ್ರಮದ ಬಗ್ಗೆ ಪೋಷಕರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ಸಹಾಯಕಿ ಅನುರಾಧ ಮಾಹಿತಿ ನೀಡಿದರು.
ನಮ್ಮ ಮಗುವಿನಲ್ಲಿ ಹ್ಯುಮಿನೆಟ್ ಶಕ್ತಿಯ ಅಂಶ ಕಡಿಮೆಯಾದಾಗ ರೋಗ ನಿರೋಧಕ ಶಕ್ತಿಯು ಅಂಶ ಕಡಿಮೆಯಾಗುತ್ತದೆ. ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಆದುದರಿಂದ ಫೆಬ್ರವರಿ 7 ರಿಂದ 28 ವರೆಗೆ ಲಸಿಕಾ ಕಾರ್ಯಕ್ರಮ ಕ್ರಿಯಾಯೋಜನೆಯ ಮೂಲಕ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ವಿವೇಕಾನಂದ ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕರಾದ ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಚಂದ್ರಶೇಖರ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರುಗಳು ಜಯಂತ್, ಲಕ್ಷ್ಮೀಶ ಗೌಡ, ದೀಪಾ ನಾಯಕ್, ಡಾ.ಅಮೃತಾ ಪ್ರಸಾದ್, ಪ್ರಾಥಮಿಕ ವಿಭಾಗದ ಮುಖ್ಯಗುರು ರಾಮ ನಾಕ್, ಕೆ.ಜಿ.ವಿಭಾಗದ ಮುಖ್ಯಸ್ಥೆ ಮಮತಾ.ಆರ್ ಉಪಸ್ಥಿತರಿದ್ದರು. ಶಿಕ್ಷಕಿ ದಿವ್ಯರಾಣಿ ವಂದಿಸಿ, ರತ್ನಮಾಲ ಮತ್ತು ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು.