ದಿನಾಂಕ 13-3-2017 ರಂದು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಆಯೋಜಿಸಿದ ಶಿಕ್ಷಣದಲ್ಲಿ ನವೀನ ಪರಿಕಲ್ಪನೆಯ ಕುರಿತ ರಾಷ್ಟ್ರಮಟ್ಟದ ಕಾರ್ಯಗಾರದಲ್ಲಿ ಎಸ್.ಎಸ್.ಎಲ್.ಸಿ. ಫಲಿಶಾಂಶದಲ್ಲಿ ಪ್ರಗತಿ ತರುವ ದೃಷ್ಟಿಯಿಂದ ಪುತ್ತೂರು ಶಿಕ್ಷಣ ಇಲಾಖೆಯ ಆರಂಭಿಸಿದ ಮಿಷನ್ 95+ ಯೋಜನೆಯನ್ನು ಮಂಡಿಸಿ, ನ್ಯಾಶನಲ್ ಕಾನ್ಪ್‌ರೆನ್ಸ್ ಆನ್ ಇನ್ನೋವೇಶನ್ಸ್ ಇನ್ ಎಜುಕೇಶನಲ್ ಅಡ್ಮಿನಿಸ್ಟ್ರೇಶನ್ ಆಂಡ್ ಪ್ರಸೆಂಟೇಶನ್ ಆಫ್ ಆವಾರ್ಡ್, ರಾಷ್ಟ್ರೀಯ ಪುರಸ್ಕಾರವನ್ನು ಕೇಂದ್ರ ಸಚಿವರಾದ ಪ್ರಕಾಶ್ ಜಾವೆಡ್ಕರ್ ಅವರಿಂದ ಸ್ವೀಕರಿಸಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಜಿ.ಎಸ್.ಶಶಿಧರ್ ಅವರನ್ನು ಅಭಿನಂಧಿಸಲಾಯಿತು.
ತಮ್ಮ ಅಭಿನಂಧನಾ ಭಾಷಣದಲ್ಲಿ ನಮ್ಮ ಸಮಾಜದಲ್ಲಿ ಎಲ್ಲಾ ಸ್ತರದ ಮಕ್ಕಳಿದ್ದು, ಮಕ್ಕಳ ಮನೆ-ಮನ ಭೇಟಿ ಮೂಲಕ ಮಿಷನ್ 95+ನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಲು ಸಾಧ್ಯವಾಯಿತು. ಇದು ಕೇವಲ ಒನ್-ಮ್ಯಾನ್-ಆರ್ಮಿ ಅಲ್ಲ ಇದು ಟೀಮ್-ವರ್ಕ್‌ನಿಂದ ಸಾಧ್ಯವಾಯಿತು ಎಂದು ನುಡಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಅಧ್ಯಕ್ಷರಾದ ವೆಂಕಟೇಶ್ವರ ಅಮೈ ಅವರು ಮಿಷನ್ 95+ ಎಂಬ ಶ್ಲೋಗನ್ ಪರಿವರ್ತನೆ ತರದು ಟೀಮ್-ವರ್ಕ್ ಮಾಡಿದರೆ ಅದು ಸಾಧ್ಯ. ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ ಎನ್ನುವ ಮಾತು ಎಷ್ಟು ಜನಜನಿತವೋ ಮಿಷನ್ 95+ ಹುಟ್ಟಿದ್ದು ಪುತ್ತೂರಿನಲ್ಲಿ ಎಂಬ ಮಾತು ಅಂತರಾಷ್ಟ್ರೀಯ ಮಟ್ಟದ ಬೆಳಗಲಿ ಎಂದು ಹೇಳಿದರು.
ವೇದಿಕೆಯಲ್ಲಿ ಅಚ್ಯುತ ನಾಯಕ್, ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಮುಖ್ಯೋಪಾಧ್ಯಾಯರುಗಳು ಉಪಸ್ಥಿತರಿದ್ದರು. ಆಂಗ್ಲ ಮಾಧ್ಯಮ ಸಂಚಾಲಕರಾದ ಮುರಳೀಧರ ಕೆ. ಸ್ವಾಗತಿಸಿ, ಶಿಕ್ಷಕಿ ರಶ್ಮಿ ಶೆಟ್ಟಿ ವಂದಿಸಿದರು. ಶಿಕ್ಷಕರಾದ ಗಣೇಶ್ ಏತಡ್ಕ, ಶಿಕ್ಷಕಿ ರೇಖಾ ಕಾರ್ಯಕ್ರಮ ನಿರೂಪಿದರು.