ದಿನಾಂಕ 18-7-2017 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ 6ನೇ ತರಗತಿಯ ಪೋಷಕರ ಸಭೆಯು ಜರಗಿತು. ಅತಿಥಿಯಾಗಿ ಆಗಮಿಸಿದ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶಾಲಿನಿ ಮಾತನಾಡುತ್ತಾ, ಪೋಷಕರು ಮಗುವಿನ ಮನಸ್ಥಿತಿಯನ್ನು ಅರ್ಥಮಾಡಿಕೊಂಡು, ವೈಚಾರಿಕ ವಿಚಾರಗಳನ್ನು ಅವರಲ್ಲಿ ಬೆಳೆಸಬೇಕು. ಸಮಾಜವನ್ನು ತಿದ್ದುವ ಬದಲು ನಮ್ಮನ್ನು ನಾವು ತಿದ್ದಿಕೊಳ್ಳುವುದು ಅಗತ್ಯ ಎಂದರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಡಾ| ಮುರಳಿಕೃಷ್ಣ ರೈಯವರು ಪೋಷಕರು ಮತ್ತು ಶಿಕ್ಷಕರು ಮಕ್ಕಳೊಟ್ಟಿಗೆ ಬೆರೆತಾಗ ಮಗುವಿನ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಹೇಳಿದರು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ರಾಮ ನಾಯ್ಕ್ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ, ಕೆ.ಜಿ. ವಿಭಾಗ ಮುಖ್ಯಸ್ಥೆ ಮಮತಾ ಉಪಸ್ಥಿತರಿದ್ದರು. ಶಿಕ್ಷಕಿ ಕುಮಾರಿ ಹಿತಾ ಪ್ರಾರ್ಥಿಸಿದರು. ಶಿಕ್ಷಕಿ ವಿದ್ಯಾರತ್ನ ಸ್ವಾಗತಿಸಿ. ಕುಮಾರಿ ಅಶ್ವಿನಿ ಭಟ್ ವಂದಿಸಿದರು. ಶ್ರೀಮತಿ ಸುಪ್ರೀತಾ ರೈ ಕಾರ್ಯಕ್ರಮ ನಿರೂಪಿಸಿದರು.