ದಿನಾಂಕ 15-7-2017 ನೇ ಶನಿವಾರದಂದು ಅಪರಾಹ್ನ 2 ಗಂಟೆಗೆ ಒಂದನೇ ತರಗತಿಯ ಪೋಷಕರ ಸಭೆಯನ್ನು ನಡೆಸಲಾಯಿತು. ಶಾಲಾ ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಸುನೀತಾ ಶೆಟ್ಟಿ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂಬ್ರ ಮರ್ಕಝುಲ್ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಸಂಧ್ಯಾ ಅವರು ಮಾತನಾಡುತ್ತಾ, ಮಕ್ಕಳ ಪೋಷಣೆಯಲ್ಲಿ ಪಾಲಕರ ಮಹತ್ವವನ್ನು ಸ್ವಾನುಭವದ ಉದಾಹರಣೆ ಮೂಲಕ ತಿಳಿಯಪಡಿಸಿದರು. ಶ್ರೀಮತಿ ವೀಣಾ ಕುಮಾರಿ ಪ್ರಾರ್ಥಿಸಿದರು. ಶ್ರೀಮತಿ ಕವಿತಾ ಸ್ವಾಗತಿಸಿ, ಶ್ರೀಮತಿ ಪುಷ್ಪಲತಾ ವಂದಿಸಿದರು. ಶ್ರೀಮತಿ ಆಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.