ವಿದ್ಯಾ ಭಾರತಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟವು ಜುಲೈ 21, 22 ,ರಂದು ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಬೆಟ್ಟಂಪಾಡಿಯಲ್ಲಿ ನಡೆದಿದ್ದು ಪ್ರಥಮ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಆಗಸ್ಟ್ 16, 17, 18 ರಂದು ಮಂಗಳ ಕ್ರೀಡಾಂಗಣ ಮಂಗಳೂರು ಇಲ್ಲಿ ನಡೆಯುವ ರಾಜ್ಯ ಮಟ್ಟಕ್ಕೆ ಅಯ್ಕೆಯಾಗಿದ್ದಾರೆ.
ಬಾಲ ವರ್ಗ ವಿಭಾಗದ ಬಾಲಕರಲ್ಲಿ ವೈಭವ್ ಎನ್ 400 ಮೀ ದ್ವಿತೀಯ, ಚಿರಾಯು ಚಕ್ರ ಎಸೆತ ಪ್ರಥಮ, ಗುಂಡು ಎಸೆತ ದ್ವಿತೀಯ, ಚಿರಾಗ್ ಗುಂಡು ಎಸೆತ ಪ್ರಥಮ, ಚಕ್ರ ಎಸೆತ ದ್ವಿತೀಯ ಸ್ಥಾನ.
ಬಾಲ ವರ್ಗ ವಿಭಾಗದ ಬಾಲಕಿಯರಲ್ಲಿ ಚರಿತಾ ಬಿ ಆರ್ ಉದ್ದ ಜಿಗಿತ ಪ್ರಥಮ, 80 ಮೀ ಹರ್ಡಲ್ಸ್ ಪ್ರಥಮ, 100 ಮೀ ದ್ವಿತೀಯ, 4×100 ಮೀ ರಿಲೇ ಪ್ರಥಮ ಸ್ಥಾನ , ಲಿಖಿತಾ ರೈ 400 ಮೀ ದ್ವಿತೀಯ, ಕವನ ಚಕ್ರ ಎಸೆತ ಪ್ರಥಮ, ಶ್ರಾವ್ಯ 400 ಮಿ ಪ್ರಥಮ, 600 ಮೀ ಪ್ರಥಮ, 4×100 ಮೀ ರಿಲೇ ಪ್ರಥಮ ಸ್ಥಾನ ಅನಘ ಕೆ ಎನ್ 200 ಮೀ ದ್ವಿತೀಯ, 4×100 ಮೀ ರಿಲೇ ಪ್ರಥಮ ಸ್ಥಾನ, ಅನಘ ಕೆ ಎ 80 ಮೀ ಹರ್ಡಲ್ಸ್ ದ್ವಿತೀಯ, ಶ್ರೀ ನಿಧಿ 4×100 ಮೀ ರಿಲೇ ಪ್ರಥಮ ಸ್ಥಾನ.
17 ರ ವಯೋಮಾವದ ಕಿಶೋರ ವರ್ಗ ಬಾಲಕರಲ್ಲಿ ವಿನಿತ್ ಜಿ ಅರ್ ಚಕ್ರ ಎಸೆತ ಪ್ರಥಮ, ಗುಂಡುಎಸೆತ ಪ್ರಥಮ,ಹ್ಯಾಮರ್ ಎಸೆತ ಪ್ರಥಮ, ಫಿರ್‌ಕಟ್ ಎಸ್ 100 ಮೀ ಹರ್ಡಲ್ಸ್ ಪ್ರಥಮ, ಕಿಶೋರ ವರ್ಗ ಬಾಲಕಿಯರಲ್ಲಿ ಹಿಮಾನಿ ಜಿ 200 ದ್ವಿತೀಯ, ಪ್ರನಮ್ಯ ಶೆಟ್ಟಿ ಜಾವೆಲಿನ್ ಪ್ರಥಮ, ಗುಂಡು ಎಸೆತ ದ್ವಿತೀಯ ಚಕ್ರ ಎಸೆತ ದ್ವಿತೀಯ ಸ್ಥಾನ ಪಡೆದಿರುತ್ತಾರೆಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.