QR Code Business Card

ಚೆಸ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರ ಹಾಗೂ ಶ್ರೀ ಸರಸ್ವತಿ ಶಿಶುಮಂದಿರ ನರಸರಾಜಪೇಟೆ, ಗುಂಟೂರು, ಆಂದ್ರಪ್ರದೇಶ ಇಲ್ಲಿ ಆಗಸ್ಟ್ 27, 28 ರಂದು ನಡೆದ ದಕ್ಷಿಣ ಮಧ್ಯ ಕ್ಷೇತ್ರೀಯ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಪ್ರಥಮ ಸ್ಥಾನ ಪಡೆದು ಹರಿಯಾಣದಲ್ಲಿ ನಡೆಯಲಿರುವ ಅಖಿಲ ಭಾರತ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

IMG_20170830_121507

ಬಾಲವರ್ಗದಲ್ಲಿ ಪಂಕಜ್ ಭಟ್ (6ನೇ) [ಮಹಾಲಿಂಗೇಶ್ವರ ಪ್ರಸಾದ್ ಮತ್ತು ಪಾವನ ಪ್ರಸಾದ್ ದಂಪತಿ ಪುತ್ರ] , ಮನ್ವಿತ್ ಕನಜಾಲು (6ನೇ) [ದಾಮೋದರ ಕನಜಾಲು ಮತ್ತು ರಶ್ಮಿ. ಪಿ.ಎಸ್ ದಂಪತಿ ಪುತ್ರ], ಗಗನ್. ಎಮ್. ಎಸ್ (8ನೇ) [ಶಿವರಾಮ. ಎಮ್. ಎಸ್ ಮತ್ತು ಮಮತಾ. ಎನ್.ಕೆ ದಂಪತಿ ಪುತ್ರ], ಸಾತ್ವಿಕ್ ಶಿವಾನಂದ (8ನೇ) [ಶ್ರೀರಾಮ್. ಪಿ.ಸಿ ಮತ್ತು ಶಿಲ್ಪಾ ಶ್ರೀರಾಮ್ ಪುತ್ರ] ಹಾಗೂ ಕಿಶೋರ ವರ್ಗದಲ್ಲಿ ಆಶಿತ್. ಎಸ್.ಕೆ (9ನೇ) [ಶಿವಕುಮಾರ್.ಕೆ ಮತ್ತು ಆಶಾಲತಾ ದಂಪತಿ ಪುತ್ರ], ಹರ್ಷಿತ್. ಎ. ಆರ್ (9ನೇ) [ರಾಮಣ್ಣ ನಾಯ್ಕ್ ಮತ್ತು ದೇವಕಿ ದಂಪತಿ ಪುತ್ರ], ಅಂಕಿತ್. ಕ್.ಎಲ್ (9ನೇ) [ಲಿಂಗಪ್ಪ ಗೌಡ ಮತ್ತು ಮಮತಾ. ಎಲ್. ಗೌಡ ದಂಪತಿ ಪುತ್ರ], ಶ್ರೇಯಸ್ ಹೇರಳೆ (9ನೇ) [ಇ. ನಾರಾಯಣ ಹೇರಳೆ ಮತ್ತು ರೇಖಾ ಹೇರಳೆ ದಂಪತಿ ಪುತ್ರ], ಎಂ. ಮಣಿಕಂಠ (10ನೇ) [ಎಂ. ಮಹೇಶ್ವರನ್ ಮತ್ತು ಕನ್ನಿಗ ಪರಮೇಶ್ವರಿ ದಂಪತಿ ಪುತ್ರ] ಭಾಗವಹಿಸಿದ್ದರು ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ತಿಳಿಸಿದ್ದಾರೆ.